ಭಾನುವಾರ, ನವೆಂಬರ್ 29, 2020
19 °C

ಕಚ್ಚಾತೈಲ ಬೆಲೆ ಶೇ 1ರಷ್ಟು ಇಳಿಕೆ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

ಟೊಕಿಯೊ: ಅಮೆರಿಕ ಮತ್ತು ಯುರೋಪ್‌ನಲ್ಲಿ ಕೋವಿಡ್‌–19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಕಚ್ಚಾತೈಲ ಬೇಡಿಕೆ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆ ಕಂಡುಬಂದಿದೆ. ಇದರಿಂದಾಗಿ ಸೋಮವಾರ ಕಚ್ಚಾತೈಲ ದರದಲ್ಲಿ ಶೇಕಡ 1ರಷ್ಟು ಇಳಿಕೆಯಾಗಿದೆ.

ಬ್ರೆಂಟ್‌ ಕಚ್ಚಾ ತೈಲ ದರ ಶೇ 1.3ರಷ್ಟು ಇಳಿಕೆಯಾಗಿ ಒಂದು ಬ್ಯಾರಲ್‌ಗೆ 41.24 ಡಾಲರ್‌ಗಳಿಗೆ (₹ 3050.94) ತಲುಪಿದೆ. ಅಮೆರಿಕದ ವೆಸ್ಟ್‌ ಟೆಕ್ಸಸ್‌ ಇಂಟರ್‌ಮಿಡಿಯೇಟ್‌ ದರ್ಜೆಯ (ಡಬ್ಲ್ಯುಟಿಐ) ಕಚ್ಚಾ ತೈಲ ದರ ಶೇ 1.3ರಷ್ಟು ಇಳಿಕೆಯಾಗಿ ಒಂದು ಬ್ಯಾರಲ್‌ಗೆ 39.32 ಡಾಲರ್‌ಗಳಿಗೆ (₹ 2908.89) ತಲುಪಿದೆ.

ಹಿಂದಿನ ವಾರ ಬ್ರೆಂಟ್‌ ಶೇ 2.7ರಷ್ಟು ಹಾಗು ಡಬ್ಲ್ಯುಟಿಐ ಶೇ 2.5ರಷ್ಟು ಇಳಿಕೆ ಕಂಡಿದ್ದವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.