ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಕ್ಷಣಕ್ಕೆ ಉತ್ಪಾದನೆ ಹೆಚ್ಚಳ ಇಲ್ಲ: ಸೌದಿ

Last Updated 26 ಏಪ್ರಿಲ್ 2019, 5:43 IST
ಅಕ್ಷರ ಗಾತ್ರ

ರಿಯಾಧ್ (ಎಎಫ್‌ಪಿ):‘ತೈಲ ಉತ್ಪಾದನೆ ಹೆಚ್ಚಿಸುವ ತಕ್ಷಣದ ಯಾವುದೇ ನಿರ್ಧಾರ ಇಲ್ಲ. ಆದರೆ, ತೈಲ ಮಾರುಕಟ್ಟೆಯಲ್ಲಿ ಸಮತೋಲನ ಕಾಯ್ದುಕೊಳ್ಳಲು ಬದ್ಧವಾಗಿದ್ದೇವೆ’ಎಂದು ಸೌದಿ ಅರೇಬಿಯಾದ ಇಂಧನ ಸಚಿವ ಖಾಲಿದ್ ಅಲ್‌ ಫಲಿಹ್‌ ತಿಳಿಸಿದ್ದಾರೆ.

‘ಅಮೆರಿಕವು ಇರಾನ್‌ ಮೇಲಿನ ನಿರ್ಬಂಧವನ್ನು ಇನ್ನಷ್ಟು ಬಿಗಿಗೊಳಿಸಿದ್ದರೂಜಾಗತಿಕ ತೈಲ ಸಂಗ್ರಹ ನಿರಂತರವಾಗಿ ಏರಿಕೆಯಾಗುತ್ತಲೇ ಇದೆ. ಹೀಗಾಗಿ ಸದ್ಯಕ್ಕೆ ಉತ್ಪಾದನೆ ಹೆಚ್ಚಿಸುವ ಅಗತ್ಯವಿದೆ ಎಂದು ಅನ್ನಿಸುತ್ತಿಲ್ಲ’ ಎಂದಿದ್ದಾರೆ.

ಅಮೆರಿಕವು ಇರಾನ್‌ ತೈಲ ಆಮದು ಮೇಲೆ ನಿರ್ಬಂಧ ಹೇರಿರುವುದರಿಂದ ಇತರೆ ದೇಶಗಳು ಉತ್ಪಾದನೆ ಹೆಚ್ಚಿಸಲಿವೆ ನಿರೀಕ್ಷೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT