ಗುರುವಾರ , ಜೂನ್ 30, 2022
23 °C

ತೈಲ ಬೆಲೆ 110 ಡಾಲರ್‌ನಲ್ಲಿ ಇದ್ದರೆ ಹಣದುಬ್ಬರಕ್ಕಿಂತಲೂ ದೊಡ್ಡ ಅಪಾಯ: ಪುರಿ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕಚ್ಚಾ ತೈಲ ದರವು ಬ್ಯಾರಲ್‌ಗೆ 110 ಡಾಲರ್‌ ಮಟ್ಟದಲ್ಲಿ ಇರುವುದು ಜಾಗತಿಕ ಆರ್ಥಿಕತೆಗೆ ಹಣದುಬ್ಬರಕ್ಕಿಂತಲೂ ದೊಡ್ಡ ಅಪಾಯ ಎಂದು ಪೆಟ್ರೋಲಿಯಂ ಸಚಿವ ಹರ್‌ದೀಪ್‌ ಸಿಂಗ್‌ ಪುರಿ ಅಭಿಪ್ರಾಯಪಟ್ಟಿದ್ದಾರೆ.

‘ಒಂದೊಮ್ಮೆ ಕಚ್ಚಾ ತೈಲ ದರವು ಬ್ಯಾರಲ್‌ಗೆ 110 ಡಾಲರ್‌ನಲ್ಲಿಯೇ ಇದ್ದರೆ ಆಗ ನೀವು ಹಣದುಬ್ಬರದ ಬಗ್ಗೆ ಮಾತ್ರ ಮಾತನಾಡುವುದಿಲ್ಲ. ಅತಿದೊಡ್ಡ ಅಪಾಯ ಆಗಿರುವ ಹಿಂಜರಿತದ ಬಗ್ಗೆ ಮಾತನಾಡುತ್ತೀರಿ’ ಎಂದು ದಾವೋಸ್‌ನಲ್ಲಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.

ಜಾಗತಿಕ ಆರ್ಥಿಕತೆಯು ಹಿಂಜರಿತದ ದಿಕ್ಕಿನಲ್ಲಿ ಸಾಗಿದರೆ, ತೈಲ ಉತ್ಪಾದಕರನ್ನೂ ಒಳಗೊಂಡು ಪ್ರತಿಯೊಬ್ಬರೂ ಹಣದುಬ್ಬರದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.