ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೈಲ ಕೊರತೆ ಇಲ್ಲ: ಸೌದಿ ಅರೇಬಿಯಾ

‘ಮಾರುಕಟ್ಟೆಯ ಅಗತ್ಯಗಳನ್ನು ಈಡೇರಿಸುವುದು ಒಪೆಕ್‌ ಹೊಣೆಗಾರಿಕೆ’
Last Updated 18 ಮೇ 2019, 20:00 IST
ಅಕ್ಷರ ಗಾತ್ರ

ಜೆದ್ದಾ (ಸೌದಿ ಅರೇಬಿಯಾ): ‘ತೈಲ ಕೊರತೆ ಇದೆ ಎಂದು ಅನ್ನಿಸುತ್ತಿಲ್ಲ. ಮಾರುಕಟ್ಟೆ ಪರಿಸ್ಥಿತಿಯನ್ನು ವಿಶ್ಲೇಷಿಸಿ ನಿರ್ಧಾರಕ್ಕೆ ಬರಲಾಗುವುದು’ ಎಂದು ಸೌದಿ ಅರೇಬಿಯಾದ ಇಂಧನ ಸಚಿವ ಖಾಲಿದ್ ಅಲ್ ಫಲಿಹ್‌ ತಿಳಿಸಿದ್ದಾರೆ.

‘ತೈಲ ಮಾರುಕಟ್ಟೆಯ ಅಗತ್ಯಗಳನ್ನು ಈಡೇರಿಸುವುದುತೈಲೋತ್ಪನ್ನ ರಫ್ತು ದೇಶಗಳ ಸಂಘಟನೆಯ (ಒಪೆಕ್‌) ಹೊಣೆಗಾರಿಕೆಯಾಗಿದೆ. ಈ ನಿಟ್ಟಿನಲ್ಲಿ ನಾವು ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳುತ್ತೇವೆ. ಇದುವರೆಗೂ ಅದನ್ನು ಅನುಸರಿಸಿಕೊಂಡೇ ಬಂದಿದ್ದೇವೆ.

‘ಸದ್ಯದ ಮಟ್ಟಿಗೆ ತೈಲ ಕೊರತೆ ಇರುವಂತೆ ಕಾಣುತ್ತಿಲ್ಲ. ತೈಲ ಸಂಗ್ರಹ ಪ್ರಮಾಣ ವಾರದಿಂದ ವಾರಕ್ಕೆ ಹೆಚ್ಚಾಗುತ್ತಲೇ ಇದೆ.ಅಮೆರಿಕ ನೀಡಿರುವ ಮಾಹಿತಿಯ ಪ್ರಕಾರ ಅಲ್ಲಿನ ತೈಲ ಸಂಗ್ರಹದಲ್ಲಿ ಭಾರಿ ಪ್ರಮಾಣದಲ್ಲಿಏರಿಕೆ ಕಂಡುಬರುತ್ತಿದೆ’ಎಂದಿದ್ದಾರೆ.

ಅಮೆರಿಕವು ಇರಾನ್‌ ಮತ್ತು ವೆನೆಜುಯೆಲಾ ಮೇಲೆ ರಫ್ತು ನಿರ್ಬಂಧ ಹೇರಿದೆ. ಇದರಿಂದ ಈ ದೇಶಗಳ ರಫ್ತು ತಗ್ಗುತ್ತಿದೆ. ಇದು ಮಾರುಕಟ್ಟೆಯಲ್ಲಿ ಅಭಾವ ಸೃಷ್ಟಿಸಬಹುದು ಎಂದು ಅಂತರರಾಷ್ಟ್ರೀಯ ಇಂಧನ ಸಂಸ್ಥೆ (ಐಇಎ) ಹೇಳಿದೆ.

‘ಒಪೆಕ್‌ ಎರಡು ಮೂಲತತ್ವಕ್ಕೆ ಬದ್ಧವಾಗಿದೆ. ಮೊದಲನೆಯದು ಮಾರುಕಟ್ಟೆಯಲ್ಲಿ ಸಮತೋಲನ ಕಾಯ್ದುಕೊಂಡು ತೈಲ ಸಂಗ್ರಹವನ್ನು ಸಹಜ ಮಟ್ಟಕ್ಕೆ ತರುವುದು. ಎರಡನೇಯದು ಮಾರುಕಟ್ಟೆಯ ಅಗತ್ಯಗಳಿಗೆ ಸ್ಪಂದಿಸುವುದು’ ಎಂದು ಖಾಲಿದ್‌ ಪ್ರತಿಕ್ರಿಯೆ ನೀಡಿದ್ದಾರೆ.

ಒಪೆಕ್‌, ರಷ್ಯಾ ಮತ್ತು ಇತರೆ ಉತ್ಪಾದಕ ದೇಶಗಳು ಜನವರಿಯಿಂದ ಆರು ತಿಂಗಳವರೆಗೆ ಅಂದರೆ ಜೂನ್‌ವರೆಗೆ ದಿನಕ್ಕೆ 12 ಲಕ್ಷ ಬ್ಯಾರೆಲ್‌ಗಳಷ್ಟು ಉತ್ಪಾದನೆ ತಗ್ಗಿಸುವ ಒಪ್ಪಂದಕ್ಕೆ ಬಂದಿವೆ.

ಮಾರುಕಟ್ಟೆ ಸ್ಥಿತಿ ಕುರಿತು ಚರ್ಚಿಸಲು ಒಪೆಕ್‌ ಮತ್ತು ಒಪೆಕ್‌ ಸದಸ್ಯರಲ್ಲದ ತೈಲ ಉತ್ಪಾದಕ ದೇಶಗಳ ಸಚಿವರ ತಂಡ ಭಾನುವಾರ ಸಭೆ ಸೇರಲಿವೆ.

ಇರಾನ್‌ ರಫ್ತು ಪ್ರಮಾಣ ಇಳಿಕೆ

ಇರಾನ್‌ ರಫ್ತು ಮಾಡುತ್ತಿರುವ ಕಚ್ಚಾ ತೈಲದ ಪ್ರಮಾಣ ತಿಂಗಳಿನಿಂದ ತಿಂಗಳಿಗೆ ಇಳಿಕೆಯಾಗುತ್ತಿದೆ.

2018ರ ಏಪ್ರಿಲ್‌ನಲ್ಲಿ ಒಂದು ದಿನಕ್ಕೆ 25 ಲಕ್ಷ ಬ್ಯಾರೆಲ್‌ಗಳಷ್ಟು ತೈಲ ರಫ್ತು ಮಾಡುತ್ತಿತ್ತು.ಅಮೆರಿಕವು ರಫ್ತು ನಿರ್ಬಂಧ ಹೇರಿರುವುದರಿಂದ ಮೇನಲ್ಲಿ ಒಂದು ದಿನದ ರಫ್ತು ಪ್ರಮಾಣ 5 ಲಕ್ಷ ಬ್ಯಾರೆಲ್‌ಗಳಷ್ಟಾಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣವು ಏಷ್ಯಾಕ್ಕೆ ರವಾನೆಯಾಗುತ್ತಿದೆ. ಆದರೆ ಖರೀದಿಸುತ್ತಿರುವವರು ಯಾರು ಎಂದು ಸ್ಪಷ್ಟವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT