ಶುಕ್ರವಾರ, ನವೆಂಬರ್ 15, 2019
23 °C

ಒಕಿನವಾ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗೆ ಆಕರ್ಷಕ ಕೊಡುಗೆ

Published:
Updated:

ಬೆಂಗಳೂರು: ಕೇಂದ್ರ ಸರ್ಕಾರದ ‘ಭಾರತದಲ್ಲಿಯೇ ತಯಾರಿಸಿ’ ಪರಿಕಲ್ಪನೆಯಲ್ಲಿ ಹೊರತರಲಾದ ಒಕಿನವಾ ಎಲೆಕ್ಟ್ರಿಕ್ ಸ್ಕೂಟರ್‌ಗಳ  ಖರೀದಿ ಮೇಲೆ ಆಕರ್ಷಕ ಕೊಡುಗೆ ಘೋಷಿಸಲಾಗಿದೆ.

ಪರಿಸರ ಸ್ನೇಹಿ ಒಕಿನವಾ ಎಲೆಕ್ಟ್ರಿಕ್ ಹೊಸ ಸ್ಕೂಟರ್ ಖರೀದಿಸಿದರೆ ಒಬ್ಬ ಅದೃಷ್ಟವಂತ ಗ್ರಾಹಕ ವಿದೇಶಕ್ಕೆ ಪ್ರವಾಸ ಮಾಡುವ ಅವಕಾಶವನ್ನು ಗಿಟ್ಟಿಸಿಕೊಳ್ಳಬಹುದು. ಇದರ ಜತೆಗೆ ಖರೀದಿಯ ಮೇಲೆ ಖಚಿತ ₹ 1,000 ರಿಯಾಯ್ತಿ ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ 20 ಅದೃಷ್ಟಶಾಲಿ ಗ್ರಾಹಕರು ಏರ್ ಕಂಡಿಷನರ್, ಎಲ್‌ಇಡಿ ಟಿವಿ, ಮೈಕ್ರೊವೇವ್, ಮಿಕ್ಸರ್ ಗ್ರೈಂಡರ್ ಬಹುಮಾನವನ್ನು ಗೆಲ್ಲಬಹುದು. ಈ ಕೊಡುಗೆ ಇದೇ 31ರವರೆಗೆ ಚಾಲ್ತಿಯಲ್ಲಿರುತ್ತದೆ. ನವೆಂಬರ್ ನಲ್ಲಿ ಅದೃಷ್ಟವಂತ ವಿಜೇತ ಗ್ರಾಹಕರ ಹೆಸರನ್ನು ಘೋಷಿಸಲಾಗುವುದು ಒಕಿನವಾ ಆಟೋಟೆಕ್‌ನ ವ್ಯವಸ್ಥಾಪಕ ನಿರ್ದೇಶಕ ಜೇತೆಂದರ್ ಶರ್ಮ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)