ಗುರುವಾರ , ನವೆಂಬರ್ 21, 2019
22 °C

ಹಳೆ ಕಾರು ಖರೀದಿ: ಯುವ ಪೀಳಿಗೆ ಒಲವು

Published:
Updated:

ಬೆಂಗಳೂರು: ಹಳೆ ಕಾರುಗಳ ಮಾರಾಟ ಹೆಚ್ಚಳದಲ್ಲಿ ಹೊಸ ತಲೆಮಾರಿನವರು ಮಹತ್ವದ ಪಾತ್ರ ವಹಿಸುತ್ತಿದ್ದಾರೆ.

ಹೊಸ ಕಾರ್‌ಗಳ ಮಾರುಕಟ್ಟೆಗೆ ಹೋಲಿಸಿದರೆ ಹಳೆ ಕಾರುಗಳ ಮಾರುಕಟ್ಟೆ (1;3) ದೊಡ್ಡದಿದೆ. 2023ರ ವೇಳೆಗೆ ಇದು ₹ 1.75 ಲಕ್ಷ ಕೋಟಿಗೆ ತಲುಪಲಿದೆ. ಮಾರುಕಟ್ಟೆಯು ಅಗಾಧ ಪ್ರಮಾಣದಲ್ಲಿ ವಿಸ್ತರಣೆಯಾಗಲು ತಂತ್ರಜ್ಞಾನ ವ್ಯಾಮೋಹಿ ಯುವ ಪೀಳಿಗೆಯ ಕೊಡುಗೆ ಗಮನಾರ್ಹವಾಗಿರುವುದು ‘ಒಎಲ್‌ಎಕ್ಸ್‌’ ನಡೆಸಿದ ವಾಹನಗಳ ಮಾರಾಟದ ಮೂರನೇ ಸಮೀಕ್ಷೆಯಲ್ಲಿ ಕಂಡು ಬಂದಿದೆ.

‘23 ರಿಂದ 37 ವರ್ಷ ವಯಸ್ಸಿನ ಒಳಗಿನವರು ವಾಹನಗಳ ಮರು ಮಾರಾಟ, ತಂತ್ರಜ್ಞಾನ ಮತ್ತು ಕಾರ್‌ನಲ್ಲಿನ ಸುರಕ್ಷತಾ ಸೌಲಭ್ಯಗಳ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಾರೆ’ ಎಂದು ಒಎಲ್‌ಎಕ್ಸ್‌ ಇಂಡಿಯಾದ ವಾಹನ ವಿಭಾಗದ ಉಪಾಧ್ಯಕ್ಷ ಸನ್ನಿ ಕಟಾರಿಯಾ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)