ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಅತಿದೊಡ್ಡ ಇ.ವಿ. ಘಟಕ: ಒಮೆಗಾ

Last Updated 22 ಏಪ್ರಿಲ್ 2022, 13:00 IST
ಅಕ್ಷರ ಗಾತ್ರ

ಮುಂಬೈ: ಕರ್ನಾಟಕದಲ್ಲಿ ಜಗತ್ತಿನ ಅತಿದೊಡ್ಡ ವಿದ್ಯುತ್ ಚಾಲಿತ ತ್ರಿಚಕ್ರ ವಾಹನ ತಯಾರಿಕಾ ಘಟಕ ಸ್ಥಾಪಿಸುವುದಾಗಿ ಒಮೆಗಾ ಸೀಕಿ ಮೊಬಿಲಿಟಿ ಕಂಪನಿಯು ಶುಕ್ರವಾರ ತಿಳಿಸಿದೆ. ಇದಕ್ಕಾಗಿ ₹ 1,900 ಕೋಟಿ ಹೂಡಿಕೆ ಮಾಡುವುದಾಗಿ ಹೇಳಿದೆ.

250 ಎಕರೆ ಪ್ರದೇಶದಲ್ಲಿ ಮೂರು ಹಂತಗಳಲ್ಲಿ ತಯಾರಿಕಾ ಘಟಕ ನಿರ್ಮಾಣ ಆಗಲಿದ್ದು, ಇದರ ವಾರ್ಷಿಕ ಸಾಮರ್ಥ್ಯವು 10 ಲಕ್ಷ ಇರಲಿದೆ. ಮುಂದಿನ ಹಣಕಾಸು ವರ್ಷದಿಂದ ತಯಾರಿಕೆ ಆರಂಭ ಆಗಲಿದೆ ಎಂದು ಕಂಪನಿಯು ತಿಳಿಸಿದೆ.

ಈ ಘಟಕ ನಿರ್ಮಾಣಕ್ಕೆ ಈಕ್ವಿಟಿ ಮತ್ತು ಸಾಲದ ಮೂಲಕ ಬಂಡವಾಳ ಸಂಗ್ರಹ ಮಾಡಲಾಗುವುದು ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT