ವಿಯೆನ್ನಾ (ಎಎಫ್ಪಿ): ಸೌದಿ ಅರೇಬಿಯಾ, ರಷ್ಯಾ ಮತ್ತು ‘ಒಪೆಕ್+’ ಸಂಘಟನೆಯ ಇತರ ಐದು ದೇಶಗಳು ಭಾನುವಾರ ತಮ್ಮ ಕಚ್ಚಾ ತೈಲ ಉತ್ಪಾದನೆ ಕೋಟಾವನ್ನು ಜಾಸ್ತಿ ಮಾಡಿವೆ.

ಯುಎಇ ದೇಶವು ಸಂಘಟನೆಯಿಂದ ದಿಢೀರ್ ಹೊರನಡೆದ ನಂತರ ಸಂಘಟನೆಯಲ್ಲಿ ನಿರಂತ ರತೆಯನ್ನು ಖಾತರಿಪಡಿಸುವ ಉದ್ದೇಶದಿಂದ ಅವು ಹೀಗೆ ಮಾಡಿವೆ ಎನ್ನಲಾಗಿದೆ.

ಕಚ್ಚಾ ತೈಲವನ್ನು ಉತ್ಪಾದಿಸುವ ಏಳು ಪ್ರಮುಖ ದೇಶಗಳು ಜೂನ್ನಲ್ಲಿ ಪ್ರತಿದಿನದ ಉತ್ಪಾದನೆಯನ್ನು 1.88 ಲಕ್ಷ ಬ್ಯಾರಲ್ನಷ್ಟು ಹೆಚ್ಚು ಮಾಡಲಿವೆ. ಕಚ್ಚಾ ತೈಲದ ಮಾರುಕಟ್ಟೆಯಲ್ಲಿ ಸ್ಥಿರತೆಯನ್ನು ತರುವ ಉದ್ದೇಶದಿಂದ ಹೀಗೆ ಮಾಡಲಾಗುತ್ತದೆ ಎಂದು ‘ಒಪೆಕ್+’ನ ಪ್ರಕಟಣೆ ತಿಳಿಸಿದೆ. ಆದರೆ ಹೇಳಿಕೆಯಲ್ಲಿ ಯುಎಇ ಬಗ್ಗೆ ಯಾವುದೇ ಉಲ್ಲೇಖ ಇಲ್ಲ.

ಯುಎಇ ಬಗ್ಗೆ ಯಾವುದೇ ಉಲ್ಲೇಖ ಇಲ್ಲದಿರುವುದು ಸಂಬಂಧಗಳು ಬಿಗುವಿನಿಂದ ಕೂಡಿರುವುದರ ಸೂಚನೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-51-481820406

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.