ಸಂಬಳಕ್ಕಿಂತ ಪಿಂಚಣಿಗೆ ಹೆಚ್ಚು ವೆಚ್ಚ

7
ವಿವಿಧ ಸಬ್ಸಿಡಿ, ಬಡ್ಡಿ ಪಾವತಿಗಳ ಮೇಲಿನ ವೆಚ್ಚವೂ ಹೆಚ್ಚಾಗಲಿದೆ

ಸಂಬಳಕ್ಕಿಂತ ಪಿಂಚಣಿಗೆ ಹೆಚ್ಚು ವೆಚ್ಚ

Published:
Updated:

ನವದೆಹಲಿ : ಕೇಂದ್ರ ಸರ್ಕಾರವು ತನ್ನ ನೌಕರರ ಸಂಬಳಕ್ಕೆ ಮಾಡುವ ವೆಚ್ಚಕ್ಕಿಂತ ನಿವೃತ್ತರಿಗೆ ಪಿಂಚಣಿಗೆ ಪಾವತಿಸುವ ವೆಚ್ಚವು ಈ ಸಾಲಿನಲ್ಲಿ ₹ 10 ಸಾವಿರ ಕೋಟಿಗಳಷ್ಟು ಹೆಚ್ಚಿಗೆ ಇರಲಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿನ ಈ ಹೆಚ್ಚಳವು ಇನ್ನೂ ಎರಡು ವರ್ಷಗಳವರೆಗೆ (2021 ಮಾರ್ಚ್‌) ಮುಂದುವರೆಯಲಿದೆ ಎಂದು ಹಣಕಾಸು ಸಚಿವಾಲಯವು ಮಾಹಿತಿ ನೀಡಿದೆ.

ನೌಕರರ ವೇತನ ವೆಚ್ಚವು ಹಿಂದಿನ ವರ್ಷದ ₹ 1.50 ಲಕ್ಷ ಕೋಟಿಯಿಂದ ಈ ಬಾರಿ ₹ 1.58 ಲಕ್ಷ ಕೋಟಿಗಳಿಗೆ ಏರಿಕೆಯಾಗಲಿದೆ. ಮುಂದಿನ ಎರಡು ವರ್ಷಗಳಲ್ಲಿ ಇದು ಏರಿಕೆಯ ಹಾದಿಯಲ್ಲಿಯೇ ಇರಲಿದೆ.

ಮುಂಬರುವ ವರ್ಷಗಳಲ್ಲಿ ಸರ್ಕಾರವು ವಿವಿಧ ಸಬ್ಸಿಡಿಗಳಿಗೆ ಮತ್ತು ಬಡ್ಡಿ ಪಾವತಿಗೆ ಮಾಡುವ ವೆಚ್ಚವೂ ಗಮನಾರ್ಹವಾಗಿ ಹೆಚ್ಚಳ ಕಾಣಲಿದೆ. 

ವಿತ್ತೀಯ ಕೊರತೆ: ಸದ್ಯಕ್ಕೆ ಇರುವ ವಿತ್ತೀಯ ಕೊರತೆಯನ್ನು (ಶೇ 3.3) 2019–20ರಲ್ಲಿ ದೇಶದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ 3.1ಕ್ಕೆ ಇಳಿಸಲು ಸರ್ಕಾರ ಸಫಲವಾಗಲಿರುವುದು ಮಾತ್ರ ಸಕಾರಾತ್ಮಕ ಸಂಗತಿಯಾಗಿದೆ.

ಸಂಪತ್ತು ಹೆಚ್ಚಿಸುವ ಮತ್ತು ಸಾಲದ ಹೊರೆ ತಗ್ಗಿಸುವ ಕಟ್ಟಡ ನಿರ್ಮಾಣ, ಯಂತ್ರೋಪಕರಣ ಖರೀದಿ ಮೇಲಿನ ಬಂಡವಾಳ ವೆಚ್ಚವು ಈ ಸಾಲಿನಲ್ಲಿ ಬಜೆಟ್‌ನಲ್ಲಿ ನಿಗದಿಪಡಿಸಿರುವ ₹ 3 ಲಕ್ಷ ಕೋಟಿಗಳಿಂದ ₹ 3.27 ಕೋಟಿಗಳಿಗೆ ಏರಿಕೆಯಾಗಲಿದೆ. ಮುಂದಿನ ಹಣಕಾಸು ವರ್ಷದಲ್ಲಿ ಇದು ₹ 3.76 ಲಕ್ಷ ಕೋಟಿಗೆ ತಲುಪಲಿದೆ.

ಈ ಹಣಕಾಸು ವರ್ಷದಲ್ಲಿ ಆರ್ಥಿಕ ವೃದ್ಧಿ ದರವು ಶೇ 7.3 ರಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ. 2019–20ರಲ್ಲಿ ಇದು ಶೇ 7.5ಕ್ಕೆ ಮತ್ತು 2020–21ರಲ್ಲಿ ಶೇ 7.8ಕ್ಕೆ ಏರಿಕೆಯಾಗಲಿದೆ ಎಂದೂ ನಿರೀಕ್ಷಿಸಲಾಗಿದೆ.

ಬರಹ ಇಷ್ಟವಾಯಿತೆ?

 • 10

  Happy
 • 1

  Amused
 • 1

  Sad
 • 1

  Frustrated
 • 6

  Angry

Comments:

0 comments

Write the first review for this !