‘ಕುಂಭಮೇಳ ವೃದ್ಧರನ್ನು ಕೈಬಿಡುವ ಜಾಗ’: ಜಾಹೀರಾತಿಗೆ ವ್ಯಾಪಕ ಆಕ್ರೋಶ

ಬುಧವಾರ, ಮಾರ್ಚ್ 27, 2019
26 °C

‘ಕುಂಭಮೇಳ ವೃದ್ಧರನ್ನು ಕೈಬಿಡುವ ಜಾಗ’: ಜಾಹೀರಾತಿಗೆ ವ್ಯಾಪಕ ಆಕ್ರೋಶ

Published:
Updated:

ಬೆಂಗಳೂರು: ಪ್ರಯಾಗ್‌ರಾಜ್ ಕುಂಭಮೇಳದಲ್ಲಿ ವೃದ್ಧರನ್ನು ಮಕ್ಕಳು ಕೈಬಿಟ್ಟು ಹೋಗುತ್ತಾರೆ ಎನ್ನುವುದನ್ನು ಬಿಂಬಿಸುವ ದೇಶದ ಪ್ರಮುಖ ಗ್ರಾಹಕ ಉತ್ಪನ್ನ ಕಂಪನಿ ಹಿಂದೂಸ್ತಾನ್ ಯೂನಿಲಿವರ್ ತನ್ನ ಚಹಾ ಬ್ರಾಂಡ್‌ ರೆಡ್‌ ಲೇಬಲ್‌ಗಾಗಿ ರೂಪಿಸಿರುವ ಜಾಹೀರಾತು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಗ್ರಾಹಕರ ಆಕ್ರೋಶಕ್ಕೆ ಮಣಿದ ಕಂಪನಿ, ವಿಡಿಯೊ ಟ್ವೀಟ್ ಮಾಡಲು ಬಳಸಿದ್ದ ಒಕ್ಕಣೆಯನ್ನು ಮುಂಜಾನೆ ಸುಮಾರು 9.50ರ ಅವಧಿಯಲ್ಲಿ ಬದಲಿಸಿತು.

ಹಿಂದೂಸ್ತಾನ್ ಯೂನಿಲಿವರ್‌ ಟ್ವಿಟರ್‌ ಪುಟದಲ್ಲಿ ಜಾಹೀರಾತಿನ ಒಕ್ಕಣೆ ಆರಂಭದಲ್ಲಿ ‘#KubhMela is a place where old people get abadoned...' ಎನ್ನುವ ಸಾಲಿನೊಂದಿಗೆ ಶುರುವಾಗಿತ್ತು. ಜನರು ಆಕ್ರೋಶ ವ್ಯಕ್ತಪಡಿಸಿದ ನಂತರ ಈ ಸಾಲುಗಳನ್ನು ‘@RedLabelChai encourages us to hold the hands of those who made us who we are’ ಎಂದು ಬದಲಿಸಲಾಯಿತು.

ಜಾಹೀರಾತು ರೂಪಿಸಿರುವ ವಿಧಾನಕ್ಕೆ ಆಕ್ಷೇಪಿಸುವ ಸಾಕಷ್ಟು ಜನರು #boycotthindustanunilever ಹ್ಯಾಷ್‌ಟ್ಯಾಗ್‌ನೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ‘ಅಷ್ಟು ದೊಡ್ಡ ಧಾರ್ಮಿಕ ಆಚರಣೆಯನ್ನು ನೀವು ವ್ಯಂಗ್ಯ ಮಾಡಬಹುದೇ’ ಎಂದು ಆಕ್ರೋಶ ವ್ಯಕ್ತಪಡಿಸಿರುವ ಹಲವು ಇನ್ನು ಮುಂದೆ ಹಿಂದೂಸ್ತಾನ್ ಯೂನಿಲಿವರ್ ಕಂಪನಿಯ ಯಾವುದೇ ಉತ್ಪನ್ನ ಬಳಸುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.


ಟ್ವಿಟರ್ ಟ್ರೆಂಡಿಂಗ್ ವಿವರ. ಮಾರ್ಚ್ 7, ಬೆಳಿಗ್ಗೆ 9.55

ಹೀಗಿದೆ ಜಾಹೀರಾತು

30 ಸೆಕೆಂಡ್ ಅವಧಿಯ ಜಾಹೀರಾತಿನ ಆರಂಭದಲ್ಲಿ ಮಗನೊಬ್ಬ ತಂದೆಯನ್ನು ಜನಜಂಗುಳಿ ಮಧ್ಯೆ ಬಿಟ್ಟು ಹೋಗುತ್ತಾನೆ. ಆದರೆ ನಂತರ ತಂದೆಯೊಬ್ಬ ತನ್ನ ಕೈಗೆ ಮಗನ ಕೈ ಬೆಸೆದುಕೊಂಡು ಬಟ್ಟೆಕಟ್ಟಿಕೊಳ್ಳುವುದನ್ನು ಗಮನಿಸಿ ಮನಸ್ಸು ಬದಲಿಸಿಕೊಂಡು ಅಪ್ಪನನ್ನು ಹುಡುಕುತ್ತಾ ಓಡುತ್ತಾನೆ. ಚಹಾ ಅಂಗಡಿಯಲ್ಲಿ ಎರಡು ಚಹಾಕ್ಕೆ ಆರ್ಡರ್ ಮಾಡಿದ್ದ ಅಪ್ಪ, ‘ನೀನು ಬಂದೇ ಬರ್ತೀ ಅಂತ ನನಗೆ ಗೊತ್ತಿತ್ತು’ ಎಂದು ನಗುತ್ತಾ ಚಹಾ ಇರುವ ಪುಟ್ಟ ಮಡಿಕೆಯನ್ನು ಬಾಯಿಗೆ ಇಡುತ್ತಾನೆ. ತಂದೆ–ಮಗ ಒಟ್ಟಿಗೆ ಚಹಾ ಕುಡಿಯುವುದರೊಂದಿಗೆ ಜಾಹೀರಾತಿನ ವಿಡಿಯೊ ಮುಗಿಯುತ್ತದೆ.

How you can repost it with th info still there in the ad pic.twitter.com/j4mYIY0XHd

ಏಕಿಷ್ಟು ಆಕ್ರೋಶ

ವಿಡಿಯೊ ಮುಗಿದ ನಂತರ ತೋರಿಸುವ ಇಂಗ್ಲಿಷ್ ಅಕ್ಷರಗಳಲ್ಲಿ ‘ಕುಂಭ ಮೇಳ ವಿಶ್ವದ ದೊಡ್ಡ ಧಾರ್ಮಿಕ ಉತ್ಸವ. ಈ ಪವಿತ್ರ ಉತ್ಸವದಲ್ಲಿ ಹಲವು ಹಿರಿಯರನ್ನು ಕುಟುಂಬಗಳು ಪರಿತ್ಯಜಿಸುತ್ತವೆ. ಈ ಬಾರಿಯ ಕುಂಭದಲ್ಲಿ ನಮ್ಮನ್ನು ಈ ಮಟ್ಟಕ್ಕೆ ತಂದವರ ಕೈಹಿಡಿದುಕೊಳ್ಳೋಣ’ ಎನ್ನುವ ಅರ್ಥ ಬರುವ ಸಾಲುಗಳಿವೆ. ಈ ಸಾಲುಗಳೇ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಟ್ವಿಟರ್‌ನ ಇಂಡಿಯಾ ಟ್ರೆಂಡಿಂಗ್‌ನಲ್ಲಿ ಗುರುವಾರ ಬೆಳಿಗ್ಗೆ 10ಕ್ಕೆ #boycotthindustanunilever ಹ್ಯಾಷ್‌ಟ್ಯಾಗ್ ಮೊದಲ ಸ್ಥಾನದಲ್ಲಿತ್ತು. ಬೆಂಗಳೂರು ಟ್ರೆಂಡಿಂಗ್‌ನಲ್ಲಿ 8ನೇ ಸ್ಥಾನದಲ್ಲಿತ್ತು.

ಬರಹ ಇಷ್ಟವಾಯಿತೆ?

 • 4

  Happy
 • 2

  Amused
 • 0

  Sad
 • 0

  Frustrated
 • 20

  Angry

Comments:

0 comments

Write the first review for this !