ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೈ ಇಂಟರ್‌ನ್ಯಾಷನಲ್‌ಬಹುಮಾನ ವಿಜೇತರು

Last Updated 12 ಡಿಸೆಂಬರ್ 2018, 20:00 IST
ಅಕ್ಷರ ಗಾತ್ರ

ಬೆಂಗಳೂರು: ಗೃಹೋಪಯೋಗಿ ಸಲಕರಣೆ, ಟಿವಿ, ಮೊಬೈಲ್‌, ಲ್ಯಾಪ್‌ಟಾಪ್‌ ಮತ್ತಿತರ ಗ್ರಾಹಕ ಬಳಕೆ ಸರಕುಗಳ ಸರಣಿ ಮಾರಾಟ ಸಂಸ್ಥೆ ಪೈ ಇಂಟರ್‌ನ್ಯಾಷನಲ್‌ ಎಲೆಕ್ಟ್ರಾನಿಕ್ಸ್‌, ನಡೆಸಿದ್ದ ‘ಮೆಗಾ ಫೆಸ್ಟಿವಲ್‌’ ಮಾರಾಟ ಸಂದರ್ಭದಲ್ಲಿ ಖರೀದಿದಾರರಿಗೆ ಆಕರ್ಷಕ ಬಹುಮಾನಗಳ ಕೊಡುಗೆ ಘೋಷಿಸಿತ್ತು.

ನಗರದಲ್ಲಿ ನಡೆದ ಸಮಾರಂಭದಲ್ಲಿ ಅದೃಷ್ಟಶಾಲಿ ಬಹುಮಾನ ವಿಜೇತರನ್ನು ಡ್ರಾ ಮೂಲಕ ಆಯ್ಕೆ ಮಾಡಲಾಗಿದೆ. ಒಟ್ಟಾರೆ ಬಹುಮಾನದ ಮೊತ್ತವು ₹ 8 ಕೋಟಿಗಳಷ್ಟಿತ್ತು.

ಪ್ರತಿಯೊಂದು ₹ 2,000 ಮೊತ್ತದ ಖರೀದಿಗೆ ಕೂಪನ್‌ ನೀಡಲಾಗಿತ್ತು. ಮೆಗಾ ಬಂಪರ್‌, ಸೂಪರ್‌ ಬಂಪರ್‌ ಮತ್ತು ಬಂಪರ್‌ ಬಹುಮಾನ ರೂಪದಲ್ಲಿ ಕ್ರಮವಾಗಿ 10 ಹುಂಡೈ ಎಕ್ಸೆಂಟ್‌, 10 ಹುಂಡೈ ಗ್ರ್ಯಾಂಡ್ ಐ10 ಮತ್ತು 10 ಹುಂಡೈ ಇಆನ್‌ ಕಾರ್‌ಗಳನ್ನು ನೀಡಲಾಗಿದೆ.

ಪೈ ಇಂಟರ್‌ನ್ಯಾಷನಲ್‌ ಮಳಿಗೆಗಳಲ್ಲಿ ₹ 50 ಸಾವಿರ ಮೊತ್ತದ ಖರೀದಿಗೆ 160 ಗ್ರಾಹಕರು, ₹ 25 ಸಾವಿರ ಮೊತ್ತದ 160, ₹ 5 ಸಾವಿರ ಮೊತ್ತದ 1,600 ಹಾಗೂ ₹ 500 ಮೊತ್ತದ ಖರೀದಿಗೆ 80 ಸಾವಿರ ಗ್ರಾಹಕರು ಆಯ್ಕೆಯಾಗಿದ್ದಾರೆ.

ಗ್ರಾಹಕರು ಲಾಟರಿ ವಿವರಗಳನ್ನು https://www.paiinternational.in/draw ತಾಣದಲ್ಲಿ ವೀಕ್ಷಿಸಬಹುದು. ಜನವರಿ 15ರ ಒಳಗೆ ವಿಜೇತರನ್ನು ಸಂ‍ಪರ್ಕಿಸಿ ಬಹುಮಾನ ವಿತರಿಸಲಾಗುವುದು. ಪೈ ಮಳಿಗೆಗಳಲ್ಲೂ ಡ್ರಾ ವಿವರಗಳು ಲಭ್ಯ ಇರಲಿವೆ ಎಂದು ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT