ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಳೆ ಎಣ್ಣೆ ಬೇಡಿಕೆ ಹೆಚ್ಚಳ ಸಾಧ್ಯತೆ

Last Updated 20 ಏಪ್ರಿಲ್ 2022, 11:17 IST
ಅಕ್ಷರ ಗಾತ್ರ

ಮುಂಬೈ: ದೇಶದಲ್ಲಿ ತಾಳೆ ಎಣ್ಣೆ ಬೇಡಿಕೆ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ. ಸಂಸ್ಕರಣೆ ಮಾಡುವವರಿಗೆ ಸೋಯಾ ಎಣ್ಣೆಗೆ ಹೋಲಿಸಿದರೆ ತಾಳೆ ಎಣ್ಣೆಯು ಪ್ರತಿ ಟನ್‌ಗೆ 150 ಡಾಲರ್‌ಗಳಷ್ಟು ಕಡಿಮೆ ದರದಲ್ಲಿ ದೊರೆಯುತ್ತಿದೆ ಎಂದು ಮುಂಬೈನ ಅಡುಗೆ ಎಣ್ಣೆ ದಲ್ಲಾಳಿ ಮತ್ತು ಸಲಹಾ ಕಂಪನಿ ಸನ್‌ವಿನ್ ಗ್ರೂಪ್‌ನ ಮುಖ್ಯ ಕಾರ್ಯನಿರ್ವಾಹಕ ಸಂದೀಪ್‌ ಬಜೋರಿಯಾ ಹೇಳಿದ್ದಾರೆ.

ಮೇ ತಿಂಗಳಿನಲ್ಲಿ ವಿತರಿಸಲಿರುವ ಕಚ್ಚಾ ತಾಳೆ ಎಣ್ಣೆಯನ್ನು ಪ್ರತಿ ಟನ್‌ಗೆ 1,765 ಡಾಲರ್‌ಗೆ (ವೆಚ್ಚ, ವಿಮೆ ಮತ್ತು ಸಾಗಣೆಯನ್ನೂ ಒಳಗೊಂಡು) ನೀಡಲು ಕೆಲವು ದೇಶಗಳು ಮುಂದಾಗಿವೆ. ಕಚ್ಚಾ ಸೋಯಾ ಎಣ್ಣೆ ಬೆಲೆಯು ಪ್ರತಿ ಟನ್‌ಗೆ 1,930 ಡಾಲರ್‌ ಇದೆ. ಕಚ್ಚಾ ಸೂರ್ಯಕಾಂತಿ ಎಣ್ಣೆ ಬೆಲೆಯು ಪ್ರತಿ ಟನ್‌ಗೆ 2,100 ಡಾಲರ್ ಇದೆ ಎಂದು ವಿತರಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT