ನವದೆಹಲಿ: ಪ್ರಸಕ್ತ ತೈಲ ಮಾರುಕಟ್ಟೆ ವರ್ಷದ ಮೊದಲ ಆರು ತಿಂಗಳಿನಲ್ಲಿ ದೇಶದ ಅಡುಗೆ ಎಣ್ಣೆ ಆಮದು ಪ್ರಮಾಣವು ಶೇ 13ರಷ್ಟು ಏರಿಕೆಯಾಗಿದೆ ಎಂದು ಭಾರತೀಯ ಎಣ್ಣೆ ಗಿರಣಿ ಮಾಲೀಕರ ಸಂಘ (ಎಸ್ಇಎ) ಬುಧವಾರ ಹೇಳಿದೆ.

ನವೆಂಬರ್ನಿಂದ ಅಕ್ಟೋಬರ್ವರೆಗಿನ ಅವಧಿಯು ತೈಲ ಮಾರುಕಟ್ಟೆ ವರ್ಷವಾಗಿದೆ.

ಕಳೆದ ತೈಲ ಮಾರುಕಟ್ಟೆ ವರ್ಷದ ನವೆಂಬರ್ನಿಂದ ಏಪ್ರಿಲ್ವರೆಗೆ ದೇಶಕ್ಕೆ 70.4 ಲಕ್ಷ ಟನ್ನಷ್ಟು ಎಣ್ಣೆ ಆಮದಾಗಿತ್ತು. ಅದು ಈ ಬಾರಿ 79.4 ಲಕ್ಷ ಟನ್ಗೆ ಹೆಚ್ಚಳವಾಗಿದೆ. ತಾಳೆ ಎಣ್ಣೆ ಆಮದಿನಲ್ಲಿ ಹೆಚ್ಚಳವಾಗಿರುವುದೇ ಆಮದು ಹೆಚ್ಚಳಕ್ಕೆ ಕಾರಣ ಎಂದು ತಿಳಿಸಿದೆ.

ಹಣಕಾಸಿನ ಮೌಲ್ಯದ ಲೆಕ್ಕದಲ್ಲಿ ಇದರ ಬೆಲೆ ₹87 ಸಾವಿರ ಕೋಟಿಯಷ್ಟಾಗಿತ್ತು. ಕಳೆದ ವರ್ಷದ ಇದೇ ಅವಧಿಯಲ್ಲಿ ಇದರ ಮೌಲ್ಯ ₹73 ಸಾವಿರ ಕೋಟಿಯಷ್ಟಿದ್ದು, ಶೇ 19ರಷ್ಟು ಹೆಚ್ಚಳವಾಗಿದೆ.

ಒಟ್ಟು ಆಮದಿನಲ್ಲಿ 78.2 ಕೋಟಿ ಟನ್ನಷ್ಟು ಅಡುಗೆ ಎಣ್ಣೆ ಆಮದು ಇದ್ದರೆ, 1.21 ಲಕ್ಷ ಟನ್ನಷ್ಟು ಅಡುಗೆಯೇತರ ಎಣ್ಣೆ ಇದೆ ಎಂದು ತಿಳಿಸಿದೆ.

ತಾಳೆ ಎಣ್ಣೆ (ಪಾಮ್ ಆಯಿಲ್) ಆಮದು 27.4 ಲಕ್ಷ ಟನ್ನಿಂದ 39.7 ಲಕ್ಷ ಟನ್ಗೆ ಹೆಚ್ಚಳವಾಗಿದೆ. ಇದೇ ಅವಧಿಯಲ್ಲಿ ಸೋಯಾಬೀನ್ ಮತ್ತು ಸೂರ್ಯಕಾಂತಿ ಎಣ್ಣೆ ಆಮದು 41.3 ಲಕ್ಷ ಟನ್ನಿಂದ 38.5 ಲಕ್ಷ ಟನ್ಗೆ ಇಳಿಕೆಯಾಗಿದೆ.

ಇಂಡೊನೇಷ್ಯಾ ಮತ್ತು ಮಲೇಷ್ಯಾ ಭಾರತಕ್ಕೆ ತಾಳೆ ಎಣ್ಣೆ ಪೂರೈಸುವ ಪ್ರಮುಖ ರಾಷ್ಟ್ರಗಳಾಗಿವೆ. ಅರ್ಜೆಂಟೀನಾ ಸೋಯಾಬೀನ್, ಬ್ರೆಜಿಲ್, ರಷ್ಯಾ ಮತ್ತು ಉಕ್ರೇನ್ ಸೂರ್ಯಕಾಂತಿ ಎಣ್ಣೆ ಪೂರೈಕೆ ಮಾಡುತ್ತವೆ.

ಕಳೆದ ವರ್ಷ ತಾಳೆ ಎಣ್ಣೆ ಬೆಲೆ ಶೇ 14ರಿಂದ ಶೇ 15ರಷ್ಟು ಏರಿಕೆಯಾಗಿದೆ. ಸೋಯಾಬೀನ್ ಮತ್ತು ಸೂರ್ಯಕಾಂತಿ ಎಣ್ಣೆ ದರ ಶೇ 17ರಿಂದ ಶೇ 22ರಷ್ಟು ಹೆಚ್ಚಳವಾಗಿದೆ.

ಕಳೆದ ವರ್ಷ ಡಾಲರ್ ಎದುರು ರೂಪಾಯಿ ಮೌಲ್ಯ ಶೇ 9.2ರಷ್ಟು ಇಳಿದಿದೆ. ಇದು ಆಮದು ವೆಚ್ಚ ಹೆಚ್ಚಿಸಿದ್ದು, ಆತಂಕ ಉಂಟು ಮಾಡಿದೆ ಎಂದು ತಿಳಿಸಿದೆ.

ನವೆಂಬರ್ನಿಂದ ಏಪ್ರಿಲ್ ಅವಧಿಯಲ್ಲಿ ನೇಪಾಳವು, ಭಾರತಕ್ಕೆ 2.17 ಲಕ್ಷ ಟನ್ನಷ್ಟು ಸಂಸ್ಕರಿಸಿದ ಎಣ್ಣೆ ಆಮದು ಮಾಡಿದೆ. ಪ್ರಸ್ತುತ ದೇಶದಲ್ಲಿ 21.2 ಲಕ್ಷ ಟನ್ ಅಡುಗೆ ಎಣ್ಣೆ ದಾಸ್ತಾನಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 13.5 ಲಕ್ಷ ಟನ್ನಷ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.