ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಂಕ ಇಳಿಸಿದರೂ ತಾಳೆ ಎಣ್ಣೆ ಬೆಲೆ ಹೆಚ್ಚಳ

Last Updated 12 ಜುಲೈ 2021, 11:12 IST
ಅಕ್ಷರ ಗಾತ್ರ

ಮುಂಬೈ: ಕೇಂದ್ರ ಸರ್ಕಾರವು ತಾಳೆ ಎಣ್ಣೆ ಮೇಲಿನ ಆಮದು ಸುಂಕವನ್ನು ಕಡಿತ ಮಾಡಿದ್ದರೂ, ದೇಶಿ ಮಾರುಕಟ್ಟೆಯಲ್ಲಿ ತಾಳೆ ಎಣ್ಣೆಯ ಬೆಲೆಯು ಶೇಕಡ 6ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಕಂಡಿದೆ.

ಭಾರತದಲ್ಲಿ ತಾಳೆ ಎಣ್ಣೆಯ ಬೇಡಿಕೆ ಜಾಸ್ತಿ ಆಗಬಹುದು ಎಂಬ ನಿರೀಕ್ಷೆಯಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳವಾದ ಪರಿಣಾಮವಾಗಿ, ದೇಶಿ ಮಾರುಕಟ್ಟೆಯಲ್ಲಿಯೂ ಬೆಲೆ ಏರಿಕೆ ಆಗಿದೆ ಎಂದು ಉದ್ಯಮದ ಮೂಲಗಳು ತಿಳಿಸಿವೆ.

ಬೆಲೆ ಏರಿಕೆ ಆಗಿರುವುದರ ಪರಿಣಾಮವಾಗಿ ದೇಶದಲ್ಲಿ ತಾಳೆ ಎಣ್ಣೆ ಬೇಡಿಕೆ ತುಸು ತಗ್ಗಬಹುದು ಎನ್ನಲಾಗಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಕೇಂದ್ರವು ಆಮದು ಸುಂಕವನ್ನು ಇನ್ನಷ್ಟು ತಗ್ಗಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

‘ಭಾರತದಲ್ಲಿ ಆಮದು ಸುಂಕ ಕಡಿಮೆ ಮಾಡಿದ ತಕ್ಷಣ ಅಂತರರಾಷ್ಟ್ರೀಯ ಮಟ್ಟದಲ್ಲಿ ಪೂರೈಕೆದಾರರು ಬೆಲೆ ಜಾಸ್ತಿ ಮಾಡಿದರು’ ಎಂದು ಭಾರತದ ಖಾದ್ಯ ತೈಲ ಸಂಸ್ಕರಣೆ ಮಾಡುವವರು ಹಾಗೂ ಮಾರಾಟ ಮಾಡುವವರ ಸಂಘಟನೆ ಎಸ್‌ಇಎ ಪ್ರತಿನಿಧಿ ಬಿ.ವಿ. ಮೆಹ್ತಾ ತಿಳಿಸಿದರು.

‘ಭಾರತವು ಆಮದು ಸುಂಕವನ್ನು ಕಡಿಮೆ ಮಾಡಿದಾಗಲೆಲ್ಲ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಆಗುತ್ತದೆ. ಹಾಗಾಗಿ, ಸುಂಕ ಇಳಿಕೆಯ ಒಂದು ಭಾಗವನ್ನು ಪೂರೈಕೆದಾರರು ತಮ್ಮ ಪ್ರಯೋಜನಕ್ಕೆ ಬಳಸಿಕೊಳ್ಳುತ್ತಾರೆ. ಈ ಬಾರಿ ಭಾರತದ ಗ್ರಾಹಕರಿಗೆ ಸುಂಕ ಇಳಿಕೆಯ ಯಾವ ‍ಪ್ರಯೋಜನವೂ ದೊರೆತಿಲ್ಲ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT