ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯಾಣಿಕ ವಾಹನ ಮಾರಾಟ 2020–21ರಲ್ಲಿ ಶೇ 2.24ರಷ್ಟು ಇಳಿಕೆ

Last Updated 12 ಏಪ್ರಿಲ್ 2021, 11:23 IST
ಅಕ್ಷರ ಗಾತ್ರ

ನವದೆಹಲಿ: ಪ್ರಯಾಣಿಕ ವಾಹನ ಮಾರಾಟವು 2020–21ರಲ್ಲಿ ಶೇಕಡ 2.24ರಷ್ಟು ಇಳಿಕೆ ಆಗಿದೆ ಎಂದು ವಾಹನ ತಯಾರಕ ಕಂಪನಿಗಳ ಒಕ್ಕೂಟವು (ಎಸ್‌ಐಎಎಂ) ಸೋಮವಾರ ತಿಳಿಸಿದೆ.

ಕಳೆದ ಕೆಲವು ವರ್ಷಗಳಿಂದ ಮಂದಗತಿಯ ಮಾರಾಟ ಪ್ರಗತಿ ಸಾಧಿಸುತ್ತಿರುವ ವಾಹನೋದ್ಯಮವು 2020–21ರಲ್ಲಿ ಕೋವಿಡ್‌–19 ಸಾಂಕ್ರಾಮಿಕದಿಂದ ಕುಸಿತ ಕಾಣುವಂತಾಯಿತು ಎಂದು ಅದು ಹೇಳಿದೆ.

ಒಕ್ಕೂಟದ ಇತ್ತೀಚಿನ ಮಾಹಿತಿಯ ಪ್ರಕಾರ, 2020–21ನೇ ಹಣಕಾಸು ವರ್ಷದಲ್ಲಿ ಎಲ್ಲಾ ಮಾದರಿಯ ವಾಹನಗಳ ಮಾರಾಟದಲ್ಲಿ ಒಟ್ಟು ಶೇ 13.6ರಷ್ಟು ಇಳಿಕೆ ಆಗಿದೆ. 2019–20ರಲ್ಲಿ 2.15 ಕೋಟಿ ವಾಹನಗಳು ಮಾರಾಟವಾಗಿದ್ದವು.

ಲಾಕ್‌ಡೌನ್‌,ಸೆಮಿಕಂಡಕ್ಟರ್‌ ಕೊರತೆ ಮತ್ತು ಕಚ್ಚಾ ಸರಕುಗಳ ಬೆಲೆ ಏರಿಕೆಯು ವಾಹನೋದ್ಯಮದ ಚಟುವಟಿಕೆಗಳ ಮೇಲೆ ಅನಿಶ್ಚಿತತೆಯನ್ನು ನಿರ್ಮಾಣ ಮಾಡಿದೆ. ಇಂತಹ ಪರಿಸ್ಥಿತಿಯಲ್ಲಿ ಭವಿಷ್ಯದ ಬಗ್ಗೆ ಅಂದಾಜು ಮಾಡುವುದಕ್ಕಿಂತಲೂ, ಹೊಸ ಭವಿಷ್ಯವನ್ನು ಸೃಷ್ಟಿಸಲು ಎಲ್ಲರೂ ಹೆಚ್ಚಿನ ಶ್ರಮ ಹಾಕಿ ಕೆಲಸ ಮಾಡಬೇಕಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಕೆನೆಚಿ ಅಯುಕವಾ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT