ನವದೆಹಲಿ (ಪಿಟಿಐ): ಹೊಸ ಆರ್ಥಿಕ ವರ್ಷದ ಮೊದಲ ತಿಂಗಳಲ್ಲಿ ದೇಶದ ಕಾರು ತಯಾರಿಕಾ ಕಂಪನಿಗಳ ವಾಹನ ಮಾರಾಟ ಪ್ರಮಾಣವು ಶೇ 27ರಷ್ಟು ಹೆಚ್ಚಳ ಕಂಡಿರುವ ಅಂದಾಜು ಇದೆ. ವಿವಿಧ ಕಂಪನಿಗಳಿಂದ ಒಟ್ಟು 4.5 ಲಕ್ಷ ವಾಹನಗಳ ಮಾರಾಟ ಆಗಿರುವ ಅಂದಾಜು ಮಾಡಲಾಗಿದೆ.

ಜಿಎಸ್ಟಿ ದರ ಪರಿಷ್ಕರಣೆ ಪ್ರಯೋಜನ, ರೆಪೊ ದರ ಇಳಿಕೆಯ ಲಾಭ ಹಾಗೂ ಆದಾಯ ತೆರಿಗೆ ವಿನಾಯಿತಿಯನ್ನು ಹೆಚ್ಚು ಮಾಡಿದ್ದರ ಅನುಕೂಲವು ಕಾರು ತಯಾರಿಕಾ ಕಂಪನಿಗಳಿಗೆ ಲಭಿಸುವುದು ಮುಂದುವರಿದಿದೆ ಎಂದು ಮಾರುತಿ ಸುಜುಕಿ ಇಂಡಿಯಾ ಕಂಪನಿಯ ಮಾರುಕಟ್ಟೆ ಮತ್ತು ಮಾರಾಟ ವಿಭಾಗದ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಪಾರ್ಥೊ ಬ್ಯಾನರ್ಜಿ ಹೇಳಿದ್ದಾರೆ.

ಕಳೆದ ವರ್ಷದ ಏಪ್ರಿಲ್ ತಿಂಗಳಲ್ಲಿ ದೇಶದ ಮಾರುಕಟ್ಟೆಯಲ್ಲಿ ಪ್ರಯಾಣಿಕ ವಾಹನಗಳ ಮಾರಾಟ ಸಂಖ್ಯೆ 3.54 ಲಕ್ಷದಷ್ಟಿತ್ತು.

ಈ ಬಾರಿಯ ಏಪ್ರಿಲ್ ತಿಂಗಳಲ್ಲಿ ಮಾರುತಿ ಸುಜುಕಿ ಕಂಪನಿಯು ಒಟ್ಟು 1.92 ಲಕ್ಷ ವಾಹನಗಳನ್ನು ಮಾರಾಟ ಮಾಡಿದೆ. ‘ನಾವು ಈ ವರ್ಷದ ಆರಂಭವನ್ನು ಭರ್ಜರಿಯಾಗಿ ಮಾಡಿದ್ದೇವೆ. ಸಣ್ಣ ಕಾರುಗಳು ಮಾರಾಟ ಸಂಖ್ಯೆಗೆ ದೊಡ್ಡ ಕೊಡುಗೆ ನೀಡಿವೆ’ ಎಂದು ಬ್ಯಾನರ್ಜಿ ತಿಳಿಸಿದ್ದಾರೆ.

ಕಂಪನಿಯ ಸಣ್ಣ ಕಾರುಗಳ ಮಾರಾಟ ಪ್ರಮಾಣವು ಶೇ 74.4ರಷ್ಟು ಹೆಚ್ಚಳ ಕಂಡಿದೆ. ಇದು ಸಣ್ಣ ಕಾರುಗಳ ಭವಿಷ್ಯದ ಬಗ್ಗೆ ಜನರಲ್ಲಿ ಇದ್ದ ಅನುಮಾನಗಳನ್ನು ತಿಳಿಗೊಳಿಸಿದೆ. ಆದರೆ ಪೆಟ್ರೋಲ್ ಬೆಲೆ ಹೆಚ್ಚಳವಾದಲ್ಲಿ ಕಾರುಮಾರಾಟದ ಮೇಲೆ ಪರಿಣಾಮ ಉಂಟಾಗಬಹುದು ಎಂದು ತಿಳಿಸಿದ್ದಾರೆ.

ಮಾರುತಿ ಸುಜುಕಿ ಕಂಪನಿ ಇನ್ನೂ 1.65 ಲಕ್ಷ ಕಾರುಗಳನ್ನು ಗ್ರಾಹಕರಿಗೆ ವಿತರಣೆ ಮಾಡಬೇಕಿದೆ. ಸಣ್ಣ ಕಾರುಗಳಿಗೆ ಗ್ರಾಹಕರು ಕಾಯಬೇಕಿರುವ ಅವಧಿಯು ಒಂದು ತಿಂಗಳಿಗೆ ವಿಸ್ತರಣೆ ಆಗಿದೆ.

ಏಪ್ರಿಲ್ನಲ್ಲಿ ಟಾಟಾ ಮೋಟರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿ. ಕಂಪನಿಯು ಒಟ್ಟು 59 ಸಾವಿರ ವಾಹನಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಏಪ್ರಿಲ್ನಲ್ಲಿ ಕಂಪನಿಯು 45 ಸಾವಿರ ವಾಹನಗಳನ್ನು ಮಾರಾಟ ಮಾಡಿತ್ತು.

ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿಯ ಪ್ರಯಾಣಿಕ ವಾಹನ ಮಾರಾಟ ಪ್ರಮಾಣವು ಏಪ್ರಿಲ್ನಲ್ಲಿ ಶೇ 8ರಷ್ಟು ಹೆಚ್ಚಳ ಕಂಡಿದ್ದು 56,331ಕ್ಕೆ ತಲುಪಿದೆ. ಹುಂಡೈ ಮೋಟರ್ ಇಂಡಿಯಾ ಕಂಪನಿಯ ವಾಹನ ಮಾರಾಟ ಪ್ರಮಾಣ ಶೇ 17ರಷ್ಟು ಹೆಚ್ಚಳ ಆಗಿದ್ದು 51,902ಕ್ಕೆ ತಲುಪಿದೆ.

ಹುಂಡೈ ಕಂಪನಿಯು ಆರಂಭ ಆದಾಗಿನಿಂದ ಇಷ್ಟು ದೊಡ್ಡ ಸಂಖ್ಯೆಯಲ್ಲಿ ವಾಹನ ಮಾರಾಟ ಮಾಡಿರುವುದು ಇದೇ ಮೊದಲು. ಕಿಯಾ ಇಂಡಿಯಾ ಕಂಪನಿಯು 27,286 ವಾಹನಗಳನ್ನು ಮಾರಾಟ ಮಾಡಿದ್ದು ಶೇ 17ರಷ್ಟು ಬೆಳವಣಿಗೆ ಸಾಧಿಸಿದೆ. ಟೊಯೊಟಾ ಕಿರ್ಲೋಸ್ಕರ್ ಮೋಟರ್ ಕಂಪನಿಯ ವಾಹನ ಮಾರಾಟ ಪ್ರಮಾಣವು ಶೇ 21ರಷ್ಟು ಜಾಸ್ತಿ ಆಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-51-246453054

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.