ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತಂಜಲಿ ಎನ್‌ಸಿಡಿ‌: ಮೂರೇ ನಿಮಿಷದಲ್ಲಿ ಮಾರಾಟ

Last Updated 28 ಮೇ 2020, 19:45 IST
ಅಕ್ಷರ ಗಾತ್ರ

ನವದೆಹಲಿ: ಪತಂಜಲಿ ಆಯುರ್ವೇದ ಕಂಪನಿಯು ₹250 ಕೋಟಿ ಮೊತ್ತದ ಪರಿವರ್ತಿಸಲಾಗದ ಸಾಲಪತ್ರ (ಎನ್‌ಸಿಡಿ) ಬಿಡುಗಡೆ ಮಾಡಿದ ಮೂರು ನಿಮಿಷಗಳಲ್ಲಿಯೇ ಮಾರಾಟವಾಗಿದೆ.

’ಎನ್‌ಸಿಡಿ ಬಿಡುಗಡೆ ಮಾಡಿದ ಮೂರು ನಿಮಿಷಗಳಲ್ಲಿಯೇ ಮಾರಾಟವಾಗಿರುವುದು ಐತಿಹಾಸಿಕ ಕ್ಷಣವಾಗಿದೆ. ಇದು ಕಂಪನಿ ಬಗೆಗಿನ ಹೂಡಿಕೆದಾರರು ಹೊಂದಿರುವ ನಂಬಿಕೆ ಮತ್ತು ಉತ್ಸಾಹವನ್ನು ತೋರಿಸುತ್ತಿದೆ’ ಎಂದು ಪತಂಜಲಿ ಆಯುರ್ವೇದದ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಪ್ರತಿಕ್ರಿಯಿಸಿದ್ದಾರೆ.

‘ದುಡಿಯುವ ಬಂಡವಾಳದ ಹಾಗೂ ಪೂರೈಕೆ ಜಾಲ ಬಲಪಡಿಸಲು ಈ ಬಂಡವಾಳ ಬಳಸಿಕೊಳ್ಳಲಾಗುವುದು. ಭಾರತದಲ್ಲಿ ಪತಂಜಲಿ ಬ್ರ್ಯಾಂಡ್‌ ಬಗ್ಗೆ ಮೂಡಿರುವ ವಿಶ್ವಾಸಾರ್ಹತೆಯನ್ನು ಈ ವಹಿವಾಟು ಪ್ರತಿಫಲಿಸಿದೆ’ ಎಂದಿದ್ದಾರೆ.

ಕಂಪನಿಯು ಇದೇ ಮೊದಲ ಬಾರಿಗೆ ಬಾಂಡ್‌ ಬಿಡುಗಡೆ ಮಾಡಿದೆ. ವಾರ್ಷಿಕ ಶೇ 10.10 ಬಡ್ಡಿ ದರದಲ್ಲಿ (ಕೂಪನ್‌ ರೇಟ್‌) ಮೂರು ವರ್ಷಗಳ ಅವಧಿಗೆ ಬಾಂಡ್‌ ನೀಡಲಾಗಿದೆ. 2023 ಮೇ 28ಕ್ಕೆ ಬಾಂಡ್‌ ಪರಿಪಕ್ವಗೊಳ್ಳಲಿದೆ.

ದಿವಾಳಿಯಾಗಿದ್ದ ರುಚಿ ಸೋಯಾ ಕಂಪನಿಯನ್ನು ಕಂಪನಿಯು2019ರ ಡಿಸೆಂಬರ್‌ನಲ್ಲಿ ₹ 4,350 ಕೋಟಿಗೆ ಸ್ವಾಧೀನಪಡಿಸಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT