ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ತಕರಿಗೆ ₹ 1 ಸಾವಿರ ಕೋಟಿ ಮೌಲ್ಯದ ಸಾಲ: ಪೇಟಿಎಂ ಗುರಿ

Last Updated 9 ನವೆಂಬರ್ 2020, 15:37 IST
ಅಕ್ಷರ ಗಾತ್ರ

ನವದೆಹಲಿ: ವರ್ತಕರಿಗೆ ಮಾರ್ಚ್‌ ಒಳಗಾಗಿ ₹ 1 ಸಾವಿರ ಕೋಟಿ ಮೊತ್ತದ ಸಾಲ ನೀಡುವ ಗುರಿ ಹೊಂದಿರುವುದಾಗಿ ಪೇಟಿಎಂ ಸೋಮವಾರ ತಿಳಿಸಿದೆ.

ವರ್ತಕರಿಗೆ ಸಾಲ ನೀಡುವ ಕಾರ್ಯಕ್ರಮದ ಅಡಿಯಲ್ಲಿ, ಬಿಸಿನೆಸ್‌ ಆ್ಯಪ್‌ ಬಳಸುವವರಿಗೆ ಜಾಮೀನು ರಹಿತ ಸಾಲ ನೀಡುವುದನ್ನು ಮುಂದುವರಿಸಲಾಗುವುದು ಎಂದು ಕಂಪನಿ ಹೇಳಿದೆ. ವರ್ತಕರಿಗೆ ತಮ್ಮ ವಹಿವಾಟನ್ನು ಡಿಜಿಟಲೀಕರಿಸಲು ಈ ಸಾಲವು ನೆರವಾಗಲಿದೆ ಎಂದು ಪೇಟಿಎಂ ಪ್ರಕಟಣೆಯಲ್ಲಿ ತಿಳಿಸಿದೆ.

ವರ್ತಕರ ನಿತ್ಯದ ವಹಿವಾಟಿನ ಆಧಾರದ ಮೇಲೆ ಸಾಲ ಯೋಗ್ಯತೆ ನಿರ್ಧರಿಸಲಾಗುವುದು. ಆ ಬಳಿಕ ಬ್ಯಾಂಕೇತರ ಹಣಕಾಸು ಕಂಪನಿಗಳು ಹಾಗೂ ಬ್ಯಾಂಕ್‌ಗಳ ಪಾಲುದಾರಿಕೆಯೊಂದಿಗೆ ಜಾಮೀನುರಹಿತ ಸಾಲ ನೀಡಲಾಗುವುದು ಎಂದು ಹೇಳಿದೆ.

ಎಂಎಸ್‌ಎಂಇಗಳಿಗೆ ₹ 5 ಲಕ್ಷದವರೆಗೆ ಕಡಿಮೆ ಬಡ್ಡಿದರಕ್ಕೆ ಜಾಮೀನು ರಹಿತ ಸಾಲ ಸೌಲಭ್ಯ ಹಾಗೂ ಸಣ್ಣ ವ್ಯಾಪಾರಿಗಳಿಗೆ ವಿಶಿಷ್ಟವಾದ ನಿತ್ಯದ ಇಎಂಐ ಸಾಲ ನೀಡುವುದಾಗಿಯೂ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT