ಪೇಟಿಎಂ ಜನರಲ್ ಇನ್ಶುರೆನ್ಸ್ ಲಿಮಿಟೆಡ್ ಸ್ಥಾಪನೆ

ನವದೆಹಲಿ: ಪೇಟಿಎಂ ಜನರಲ್ ಇನ್ಶುರೆನ್ಸ್ ಲಿಮಿಟೆಡ್ (ಪಿಜಿಐಎಲ್) ಎನ್ನುವ ಜಂಟಿ ಉದ್ದಿಮೆ ಸ್ಥಾಪನೆ ಮಾಡಿರುವುದಾಗಿ ಪಾವತಿ ಮತ್ತು ಹಣಕಾಸು ಸೇವೆಗಳನ್ನು ನೀಡುವ ಪೇಟಿಎಂನ ಮಾತೃಸಂಸ್ಥೆ ಒನ್97 ಕಮ್ಯುನಿಕೇಷನ್ಸ್ ಶನಿವಾರ ತಿಳಿಸಿದೆ. ಈ ವಿಮಾ ಕಂಪನಿಯಲ್ಲಿ 10 ವರ್ಷದಲ್ಲಿ ₹ 950 ಕೋಟಿ ಹೂಡಿಕೆ ಮಾಡುವುದಾಗಿಯೂ ಅದು ತಿಳಿಸಿದೆ
ಪಿಜಿಐಎಲ್ ಸ್ಥಾಪನೆಗೆ ಆಡಳಿತ ಮಂಡಳಿಯು ಶುಕ್ರವಾರ ಒಪ್ಪಿಗೆ ನೀಡಿದೆ ಎಂದು ಕಂಪನಿಯು ಷೇರುಪೇಟೆ ಶನಿವಾರ ತಿಳಿಸಿದೆ.
ವಿಮಾ ಕಂಪನಿಯಲ್ಲಿ ಒನ್97 ಕಮ್ಯುನಿಕೇಷನ್ಸ್ ಆರಂಭದಲ್ಲಿ ಶೇ 49ರಷ್ಟು ಷೇರುಪಾಲು ಹೊಂದಲಿದೆ. ಇನ್ನುಳಿದ ಶೇ 51ರಷ್ಟು ಷೇರು ಪಾಲನ್ನು ವ್ಯವಸ್ಥಾಪಕ ನಿರ್ದೇಶಕ ವಿಜಯ್ ಶೇಖರ್ ಶರ್ಮಾ ನೇತೃತ್ವದ ವಿಎಸ್‌ಎಸ್ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್ ಹೊಂದಲಿದೆ. ಬಂಡವಾಳ ಹೂಡಿಕೆಯ ನಂತರ ವಿಮಾ ಕಂಪನಿಯಲ್ಲಿ ಪೇಟಿಎಂ ಪಾಲು ಶೇ 74ರಷ್ಟಾಗಲಿದ್ದು, ವಿಎಚ್‌ಪಿಎಲ್‌ನ ಪಾಲು ಶೇ 26ಕ್ಕೆ ಇಳಿಕೆ ಆಗಲಿದೆ.
ಪಿಜಿಐಎಲ್‌ಗೆ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಐಆರ್‌ಡಿಎಐ) ಒಪ್ಪಿಗೆ ದೊರೆಯಬೇಕಿದೆ.
ರಹೇಜಾ ಕ್ಯೂಬಿಇ ಜನರಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ಅನ್ನು ಸ್ವಾಧೀನಪಡಿಸಿಕೊಳ್ಳುವ ಸಂಬಂಧ ಷೇರು ಖರೀದಿ ಒಪ್ಪಂದವು ನಿಗದಿತ ಸಮಯದಲ್ಲಿ ಪೂರ್ಣಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಕಂಪನಿಯ ಆಡಳಿತಯು ಜಂಟಿ ಉದ್ದಿಮೆ ಸ್ಥಾಪಿಸುವ ನಿರ್ಧಾರಕ್ಕೆ ಬಂದಿದೆ. ರಹೇಜಾ ಕ್ಯುಬಿಇ ಅನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ಪೇಟಿಎಂ 2020ರ ಜುಲೈನಲ್ಲಿ ಘೋಷಿಸಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.