ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಟಿಎಂ: ಹೋಟೆಲ್ ಬುಕಿಂಗ್ ಸೇವೆ ಆರಂಭ

Last Updated 31 ಜನವರಿ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಪೇಟಿಎಂ ಸಂಸ್ಥೆಯು ದೇಶೀಯವಾಗಿ ಹೋಟೆಲುಗಳನ್ನು ಕಾಯ್ದಿರಿಸುವ ಹೊಸ ಸೇವೆ ಆರಂಭಿಸಿದೆ.

ಇದಕ್ಕೆ ಪೂರಕವಾಗಿ ಐಷಾರಾಮಿ ಹೋಟೆಲ್ ಬುಕಿಂಗ್ ಕಂಪನಿಯಾದ ‘ನೈಟ್‍ಸ್ಟೇ’ ಸ್ವಾಧೀನ ಪಡಿಸಿಕೊಂಡಿದೆ. ಮೊದಲ ಹಂತದಲ್ಲಿ 5 ಸಾವಿರ ಹೋಟೆಲುಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇವುಗಳಲ್ಲಿ ಸ್ಟರ್ಲಿಂಗ್, ಜಿಂಜರ್ ಮತ್ತು ಬ್ಲೂಮ್‍ರೂಮ್ಸ್ ಸಮೂಹದ ಹೋಟೆಲುಗಳೂ ಸೇರಿವೆ.

ಆರ್ಬ್ ಎನರ್ಜಿ: ಮೇಲ್ಚಾವಣಿ ಸೌರಶಕ್ತಿ ಘಟಕ
ಬೆಂಗಳೂರು:
ಸತ್ಯಸಾಯಿ ಕೇಂದ್ರ ಟ್ರಸ್ಟ್ ಸಂಸ್ಥೆಯ ಸಾಯಿಮಿತ್ರ 2ನೇ ಹಂತದ ಯೋಜನೆಯಡಿ ಸೌರಶಕ್ತಿ ಕಂಪನಿ ಆರ್ಬ್ ಎನರ್ಜಿ, ಒಟ್ಟು 2.27 ಮೆಗಾವಾಟ್‌ ಸಾಮರ್ಥ್ಯದ ಮೇಲ್ಚಾವಣಿ ಸೌರ ಶಕ್ತಿ ವ್ಯವಸ್ಥೆ ಅಳವಡಿಸಲಿದೆ.

ಆಂಧ್ರಪ್ರದೇಶ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಟ್ರಸ್ಟ್‌ನ 5 ಸ್ಥಳಗಳಲ್ಲಿ ಸೌರಶಕ್ತಿ ಅಳವಡಿಸಲಿದೆ. ಇದರಿಂದ ಪ್ರತಿ ವರ್ಷ 33 ಲಕ್ಷ ಯೂನಿಟ್‍ಗಳಷ್ಟು ಸೌರಶಕ್ತಿ ಉತ್ಪಾದನೆಯಾಗಲಿದೆ ಎಂದು ಸಂಸ್ಥೆ ತಿಳಿಸಿದೆ.

ವಿಶ್ವದ ಮುಂಚೂಣಿ 100 ಬ್ರ್ಯಾಂಡ್‌ಗಳ ಸಾಲಿಗೆ ಟಾಟಾ ಸನ್ಸ್‌
ಮುಂಬೈ:
ವಿಶ್ವದ ಮುಂಚೂಣಿ 100 ಮೌಲ್ಯಯುತ ಬ್ರ್ಯಾಂಡ್‌ಗಳ ಸಾಲಿಗೆ ಟಾಟಾ ಬ್ರ್ಯಾಂಡ್ ಸೇರ್ಪಡೆಯಾಗಿದೆ.

ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ಸಮಾವೇಶದ ಸಂದರ್ಭದಲ್ಲಿ ಬಿಡುಗಡೆ ಮಾಡಲಾದ ಜಾಗತಿಕ ಮಟ್ಟದಲ್ಲಿ ಕಾರ್ಪೊರೇಟ್‌ಗಳ ಬ್ರ್ಯಾಂಡ್ ಮೌಲ್ಯಮಾಪನ ಮಾಡುವ ಮತ್ತು ಸಲಹಾ ಸಂಸ್ಥೆ ‘ಬ್ರ್ಯಾಂಡ್‌ ಫೈನಾನ್ಸ್‌’ ವರದಿಯಲ್ಲಿ ಈ ಮಾಹಿತಿ ಇದೆ. ಟಾಟಾ, 104ನೆ ಸ್ಥಾನದಿಂದ 86ನೆ ಸ್ಥಾನಕ್ಕೆ ಬಡ್ತಿ ಪಡೆದಿದೆ. ಈ ಗೌರವಕ್ಕೆ ಪಾತ್ರವಾದ ಭಾರತದ ಏಕೈಕ ಬ್ರ್ಯಾಂಡ್‌ ಕೂಡ ಇದಾಗಿದೆ.

ಟಾಟಾದ ಬ್ರ್ಯಾಂಡ್‌ ಮೌಲ್ಯವು ಒಂದು ವರ್ಷದಲ್ಲಿ ₹ 99,400 ಕೋಟಿಗಳಿಂದ ಶೇ 37ರಷ್ಟು ಹೆಚ್ಚಾಗಿ ₹ 1.36 ಲಕ್ಷ ಕೋಟಿಗೆ ಏರಿಕೆಯಾಗಿದೆ.

ಎಲ್‌ಪಿಜಿ ಅಗ್ಗ
ನವದೆಹಲಿ (ಪಿಟಿಐ):
ಸಬ್ಸಿಡಿಸಹಿತದ ಅಡುಗೆ ಅನಿಲ ಸಿಲಿಂಡರುಗಳ (ಎಲ್‌ಪಿಜಿ) ಬೆಲೆಯನ್ನು ₹ 1.46ರಂತೆ ಮತ್ತು ಸಬ್ಸಿಡಿರಹಿತ ಸಿಲಿಂಡರುಗಳ ಮಾರುಕಟ್ಟೆ ದರವನ್ನು ₹ 30ರಂತೆ ಕಡಿಮೆ ಮಾಡಲಾಗಿದೆ. ಗುರುವಾರ ಮಧ್ಯರಾತ್ರಿಯಿಂದಲೇ ಹೊಸ ದರ ಜಾರಿಗೆ ಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT