ಶುಕ್ರವಾರ, ಡಿಸೆಂಬರ್ 3, 2021
20 °C

ಹಬ್ಬದ ಸಂದರ್ಭದಲ್ಲಿ ಮಾರುಕಟ್ಟೆ ಪ್ರಚಾರಕ್ಕೆ ₹100 ಕೋಟಿ ಖರ್ಚು ಮಾಡಲಿದೆ ಪೇಟಿಎಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಡಿಜಿಟಲ್ ಪಾವತಿ ಸೇವೆಗಳನ್ನು ನೀಡುವ ಪೇಟಿಎಂ, ಹಬ್ಬದ ಋತುವಿನಲ್ಲಿ ಮಾರುಕಟ್ಟೆ ಪ್ರಚಾರ ಚಟುವಟಿಕೆಗಳಿಗಾಗಿ ₹ 100 ಕೋಟಿ ಮೊತ್ತವನ್ನು ಮೀಸಲಿರಿಸಿದೆ.

ದೇಶದಲ್ಲಿ ಡಿಜಿಟಲ್‌ ಪಾವತಿಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಪ್ರಚಾರ ಕಾರ್ಯಕ್ರಮಗಳು ನಡೆಯಲಿದ್ದು, ಹಣ ವರ್ಗಾವಣೆ, ಪೇಟಿಎಂ ವಾಲೆಟ್‌ ಮತ್ತು ಪೇಟಿಎಂ ಪೋಸ್ಟ್‌ ಪೇಯ್ಡ್‌ ಸೌಲಭ್ಯಗಳ ಕುರಿತು ಅರಿವು ಮೂಡಿಸಲಿದೆ ಎಂದು ಕಂಪನಿ ಹೇಳಿದೆ.

ಅಕ್ಟೋಬರ್ 14ರಿಂದ ನವೆಂಬರ್‌ 14ರವರೆಗೆ ಪೇಟಿಎಂ ಕ್ಯಾಷ್‌ಬ್ಯಾಕ್‌ ಧಮಾಕಾ ಎಂಬ ಕ್ಯಾಷ್‌ಬ್ಯಾಕ್‌ ಹಬ್ಬವನ್ನು ಕಂಪನಿ ಘೋಷಿಸಿದ್ದು, ಆ್ಯಪ್ ಮೂಲಕ ಮಾಡುವ ಹಣ ವರ್ಗಾವಣೆ, ಆನ್‍ಲೈನ್, ಆಫ್‍ಲೈನ್ ಪಾವತಿಗಳು ಅಥವಾ ರೀಚಾರ್ಜ್‍ಗಳಿಗೆ ಕ್ಯಾಶ್‍ಬ್ಯಾಕ್‍ ಗೆಲ್ಲಬಹುದಾಗಿದೆ. 

ಅ. 14ರಿಂದ ನ. 14ರವರೆಗೆ ಪ್ರತಿದಿನ 10 ಅದೃಷ್ಟಶಾಲಿ ಬಳಕೆದಾರರು ತಲಾ ₹ 1 ಲಕ್ಷದವರೆಗೆ ಕ್ಯಾಷ್‌ಬ್ಯಾಕ್‌ ಗೆಲ್ಲಬಹುದು. ನವಂಬರ್ 1ರಿಂದ 3ರ ನಡುವೆ ಬಳಕೆದಾರರು ಪ್ರತಿದಿನ ₹ 10 ಲಕ್ಷದವರೆಗೆ ಗೆಲ್ಲಬಹುದು. ಜೊತೆಗೆ ಐಫೋನ್‌ 13, ಟಿ20 ವಿಶ್ವಕಪ್‍ಗೆ ಟಿಕೆಟ್‌, ಹಲವು ಜನಪ್ರಿಯ ಬ್ರ್ಯಾಂಡ್‌ಗಳ ಶಾಪಿಂಗ್ ವೋಚರ್‌ಗಳನ್ನು ಗೆಲ್ಲುವ ಅವಕಾಶ ಪಡೆಯಲಿದ್ದಾರೆ.

‘ಹೆಚ್ಚು ಹೆಚ್ಚು ಬಳಕೆದಾರರನ್ನು ಡಿಜಿಟಲ್ ಪಾವತಿಗಳ ಮೂಲಕ ಸಬಲಗೊಳಿಸುವುದು ನಮ್ಮ ಗುರಿ’ ಎಂದು ಪೇಟಿಎಮ್ ವಕ್ತಾರರೊಬ್ಬರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು