ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೆಂಗಳೂರು ಒನ್’ ಜತೆ ಪೇಟಿಎಂ ಒಪ್ಪಂದ

Last Updated 7 ನವೆಂಬರ್ 2018, 20:00 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಮಹಾನಗರ ಮತ್ತು ರಾಜ್ಯದ 17 ನಗರಗಳ ಬಳಕೆದಾರರು ಇನ್ನು ಮುಂದೆ ‘ಬೆಂಗಳೂರು ಒನ್’ ಹಾಗೂ ‘ಕರ್ನಾಟಕ ಒನ್’ ಕೇಂದ್ರಗಳಲ್ಲಿ ಪೇಟಿಎಂ ಮೂಲಕ ಹಣ ಪಾವತಿ ಮಾಡಬಹುದಾಗಿದೆ.

ಕನಿಷ್ಠ ₹ 200 ಪಾವತಿಸುವ ಗ್ರಾಹಕರಿಗೆ ಆರಂಭಿಕ ಕೊಡುಗೆಯಾಗಿ ಶೇ 10ರಷ್ಟು ಹಣ ಹಿಂದಿರುಗಿಸಲಾಗುವ ಕೊಡುಗೆ ಇದೆ ಎಂದು ‘ಪೇಟಿಎಂ’ನ ಸಿಒಒ ಕಿರಣ್ ವಸಿರೆಡ್ಡಿ ಹೇಳಿದ್ದಾರೆ. ಪೇಟಿಎಂ ಮಾಲೀಕತ್ವ ಹೊಂದಿರುವ ಒನ್97 ಕಮ್ಯುನಿಕೇಷನ್ಸ್ ಲಿಮಿಟೆಡ್, ರಾಜ್ಯ ಸರ್ಕಾರದ ಅಂಗಸಂಸ್ಥೆಗಳಾದ ಇಡಿಸಿಎಸ್ ಮತ್ತು ಡಿಪಿಎಆರ್ (ಇ-ಆಡಳಿತ) ಜತೆ ಒಪ್ಪಂದ ಮಾಡಿಕೊಂಡಿದೆ.

ಗೋಏರ್‌: ಬೆಂಗಳೂರಿನಿಂದ ಫುಕೆಟ್, ಮಾಲೆಗೆ ಸಂಪರ್ಕ
ಬೆಂಗಳೂರು:
ವಿಮಾನ ಯಾನ ಸಂಸ್ಥೆ ಗೋಏರ್, ಬೆಂಗಳೂರಿನಿಂದ ಫುಕೆಟ್ ಮತ್ತು ಮಾಲೆಗೆ ವಿಮಾನ ಹೊಸ ಸೇವೆ ಆರಂಭಿಸಲಿದ್ದು, ಡಿಸೆಂಬರ್‌ 9ರಿಂದ ಜಾರಿಗೆ ಬರಲಿದೆ.

ಬೆಂಗಳೂರು-ಫುಕೆಟ್ ಮಧ್ಯೆ ವಾರಕ್ಕೆ ಮೂರು ಬಾರಿ ಮತ್ತು ಬೆಂಗಳೂರು-ಮಾಲೆ ಮಧ್ಯೆ ವಾರಕ್ಕೆ ಎರಡು ಬಾರಿ ವಿಮಾನ ಸೇವೆ ಇರಲಿದೆ. ಗೋಏರ್ ಮೊಬೈಲ್ ಆ್ಯಪ್‌ನಲ್ಲಿಯೂ ಟಿಕೆಟ್‌ ಖರೀದಿಸಬಹುದಾಗಿದೆ ಎಂದು ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT