ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸೆಂಬರ್‌ ತ್ರೈಮಾಸಿಕ: ಪೇಟಿಎಂ ನಷ್ಟ ₹ 778 ಕೋಟಿ

Last Updated 5 ಫೆಬ್ರುವರಿ 2022, 10:06 IST
ಅಕ್ಷರ ಗಾತ್ರ

ನವದೆಹಲಿ: ಡಿಜಿಟಲ್‌ ಪಾವತಿ ಮತ್ತು ಹಣಕಾಸು ಸೇವೆಗಳನ್ನು ನೀಡುವ ಪೇಟಿಎಂನ ಮಾತೃಸಂಸ್ಥೆ ಒನ್‌97 ಕಮ್ಯುನಿಕೇಷನ್ಸ್‌ನ ನಷ್ಟವು ಪ್ರಸಕ್ತ ಹಣಕಾಸು ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ₹ 778.5 ಕೋಟಿಗೆ ತಲುಪಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ನಷ್ಟವು ₹ 535.5 ಕೋಟಿಗಳಷ್ಟು ಇತ್ತು ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.

ಕಾರ್ಯಾಚರಣಾ ವರಮಾನವು ₹ 772 ಕೋಟಿಗಳಿಂದ ₹ 1,456 ಕೋಟಿಗೆ ಏರಿಕೆ ಆಗಿದೆ. ಪೇಟಿಎಂನ ಪಾವತಿ ಸೇವೆಗಳು ಶೇ 60ರಷ್ಟು ಬೆಳವಣಿಗೆ ಕಂಡಿದ್ದು ₹ 254 ಕೋಟಿಗಳಿಂದ ₹ 406 ಕೋಟಿಗಳಿಗೆ ಏರಿಕೆ ಆಗಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT