ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೆಂಬರ್ 8ರಿಂದ 10ರವರೆಗೆ ಪೇಟಿಎಂ ಐಪಿಒ

Last Updated 28 ಅಕ್ಟೋಬರ್ 2021, 14:52 IST
ಅಕ್ಷರ ಗಾತ್ರ

ನವದೆಹಲಿ: ಪೇಟಿಎಂ ಕಂಪನಿಯ ಮಾತೃಸಂಸ್ಥೆ ಆಗಿರುವ ಒನ್‌97 ಕಮ್ಯುನಿಕೇಷನ್ಸ್‌ ತನ್ನ ಷೇರುಗಳನ್ನು ಸಾರ್ವಜನಿಕರಿಗೆ ಖರೀದಿಗೆ ಮುಕ್ತವಾಗಿಸಲಿದ್ದು, ನವೆಂಬರ್ 8ರಿಂದ 10ರವರೆಗೆ ಆರಂಭಿಕ ಸಾರ್ವಜನಿಕ ಕೊಡುಗೆಗೆ (ಐಪಿಒ) ಅರ್ಜಿ ಸಲ್ಲಿಸಲು ಅವಕಾಶ ಇರಲಿದೆ. ಕಂಪನಿಯು ಪ್ರತಿ ಷೇರಿಗೆ ₹ 2,080–2,150 ಬೆಲೆ ನಿಗದಿ ಮಾಡಿದೆ.

ಅಂದರೆ, ಕಂಪನಿಯು ತನ್ನ ಮೌಲ್ಯವು ₹ 1.48 ಲಕ್ಷ ಕೋಟಿ ಎಂದು ಹೇಳಿದೆ. ಐಪಿಒ ಮೂಲಕ ಕಂಪನಿಯು ಒಟ್ಟು ₹ 18,300 ಕೋಟಿ ಸಂಗ್ರಹಿಸಲಿದೆ. ಇದು ದೇಶದಲ್ಲಿನ ಇದುವರೆಗಿನ ಅತಿದೊಡ್ಡ ಐಪಿಒ ಆಗಲಿದೆ.

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಕಂಪನಿಯ ಆದಾಯವು ಶೇಕಡ 62ರಷ್ಟು ಹೆಚ್ಚಳ ಕಂಡಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ₹ 5,512 ಕೋಟಿ ಆದಾಯ ಗಳಿಸಿದ್ದ ಕಂಪನಿಯು, ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ₹ 8,908 ಕೋಟಿ ಆದಾಯ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT