ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ವರ್ಷದಲ್ಲೇ ಗರಿಷ್ಠ ಮಟ್ಟಕ್ಕೆ ಪೆಟ್ರೋಲ್, ಡೀಸೆಲ್ ದರ 

Last Updated 6 ಡಿಸೆಂಬರ್ 2020, 12:19 IST
ಅಕ್ಷರ ಗಾತ್ರ

ಬೆಂಗಳೂರು: ಅಂತರರಾಷ್ಟ್ರೀಯ ತೈಲ ಕಂಪನಿಗಳು ತೈಲ ದರ ಹೆಚ್ಚಿರುವುದರಿಂದ ಸತತ ಐದನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದೆ. ಭಾನುವಾರ ಪೆಟ್ರೋಲ್ ಬೆಲೆ 28 ಪೈಸೆ ಮತ್ತು ಡೀಸೆಲ್ ಬೆಲೆ 29 ಪೈಸೆ ಏರಿಕೆ ಕಂಡಿದೆ.

ಬೆಂಗಳೂರಲ್ಲಿ ಪೆಟ್ರೋಲ್ ದರ ₹86.20,ಡೀಸೆಲ್ ₹78.03ಕ್ಕೆ ಏರಿದೆ. ನವದೆಹಲಿಯಲ್ಲಿ ಪೆಟ್ರೋಲ್ ದರ ₹83.41, ಡೀಸೆಲ್ ದರ 73.32 ಮತ್ತು ಮುಂಬೈನಲ್ಲಿ ಪೆಟ್ರೋಲ್ ದರ ₹90.05,ಡೀಸೆಲ್ ದರ 80.23ಕ್ಕೆ ಜಿಗಿದಿದೆ.

ನವೆಂಬರ್ 20 ರಿಂದ ತೈಲ ಕಂಪನಿಗಳು ನಿತ್ಯ ದರ ಪರಿಷ್ಕರಣೆ ಆರಂಭಿಸಿದ ಬಳಿಕ 14 ಬಾರಿ ತೈಲ ದರ ಏರಿಕೆ ಕಂಡಿದ್ದು, ಕಳೆದ 5 ದಿನಗಳಿಂದ ಸತತ ಏರಿಕೆ ಆಗುತ್ತಿದೆ. ಹೀಗಾಗಿ, ಸದ್ಯದ, ಪೆಟ್ರೋಲ್, ಡೀಸೆಲ್ ದರ ಸೆಪ್ಟೆಂಬರ್ 2018ರಿಂದೀಚೆಗೆ ಗರಿಷ್ಠ ಮಟ್ಟದ್ದಾಗಿದೆ.

17 ದಿನಗಳಲ್ಲಿ ಪೆಟ್ರೋಲ್ ಬೆಲೆಯಲ್ಲಿ ₹2.35 ಮತ್ತು ಡೀಸೆಲ್ ಬೆಲೆಯಲ್ಲಿ ₹3.15 ಹೆಚ್ಚಾಗಿದೆ.

ಅಕ್ಟೋಬರ್ 3 ರಂದು ಬ್ಯಾರೆಲ್‌ಗೆ 36.9 ಡಾಲರ್‌ನಷ್ಟಿದ್ದ ಬ್ರೆಂಟ್ ಕಚ್ಚಾ ತೈಲ ದರ ಡಿಸೆಂಬರ್ 4ರ ಹೊತ್ತಿಗೆ 49.5 ಡಾಲರ್‌ಗೆ ಮುಟ್ಟಿದೆ. ಕೋವಿಡ್ 19 ಲಸಿಕೆಯಿಂದಾಗಿ ಬೇಡಿಕೆ ಹೆಚ್ಚಾಗುವ ಭರವಸೆಯಿಂದಾಗಿ ಬ್ರೆಂಟ್ ಕಚ್ಚಾತೈಲ ದರ ಹೆಚ್ಚಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT