ನವದೆಹಲಿ: ಪೆಟ್ರೋಲ್ ದರವನ್ನು ಲೀಟರಿಗೆ ₹2.61 ಹಾಗೂ ಡೀಸೆಲ್ ದರವನ್ನು ₹2.71ರಷ್ಟು ಹೆಚ್ಚು ಮಾಡಲಾಗಿದ್ದು, ಪರಿಷ್ಕೃತ ದರ ಸೋಮವಾರದಿಂದ ಜಾರಿಗೆ ಬಂದಿದೆ.

ಸರ್ಕಾರಿ ಸ್ವಾಮ್ಯದ ತೈಲೋತ್ಪನ್ನಗಳ ಮಾರಾಟ ಕಂಪನಿಗಳು ಮೇ 15ರ ಬಳಿಕ ಇಂಧನ ದರವನ್ನು ನಾಲ್ಕನೇ ಬಾರಿ ಏರಿಕೆ ಮಾಡಿವೆ. ಈ ಹೆಚ್ಚಳದೊಂದಿಗೆ 11 ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರವು ಸರಿಸುಮಾರು ₹7.50ರಷ್ಟು ತುಟ್ಟಿ ಆದಂತಾಗಿದೆ.

ಇದೀಗ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ ₹110.89 ಹಾಗೂ ಡೀಸೆಲ್ ದರ ₹98.80 ಆಗಿದೆ. ನವದೆಹಲಿಯಲ್ಲಿ ಪೆಟ್ರೋಲ್ ಬೆಲೆ ಶತಕದ ಗಡಿ ದಾಟಿದ್ದು, ಲೀಟರಿಗೆ ₹102.12 ಆಗಿದೆ. ಡೀಸೆಲ್ ದರ ₹92.49ರಿಂದ ₹95.20ಕ್ಕೆ ಏರಿಕೆಯಾಗಿದೆ ಎಂದು ಉದ್ಯಮದ ಮೂಲಗಳು ತಿಳಿಸಿವೆ.

ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರ ₹111.21 ಹಾಗೂ ಡೀಸೆಲ್ ದರ ₹97.83 ಆಗಿದೆ. ಕೋಲ್ಕತ್ತದಲ್ಲಿ ಪೆಟ್ರೋಲ್ಗೆ ₹113.51, ಡೀಸೆಲ್ಗೆ ₹99.92, ಚೆನ್ನೈನಲ್ಲಿ ಪೆಟ್ರೋಲ್ಗೆ ₹107.77 ಹಾಗೂ ಡೀಸೆಲ್ಗೆ ₹99.55 ಬೆಲೆ ಇದೆ. ಮೌಲ್ಯವರ್ಧಿತ ತೆರಿಗೆಯಲ್ಲಿನ ವ್ಯತ್ಯಾಸಗಳಿಂದಾಗಿ ಪೆಟ್ರೋಲ್, ಡೀಸೆಲ್ ದರದಲ್ಲಿ ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸ ಇರುತ್ತದೆ.

ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಕಳೆದ ಎರಡು ವರ್ಷಗಳಲ್ಲಿ ಯಾವುದೇ ವ್ಯತ್ಯಾಸ ಉಂಟಾಗಿರಲಿಲ್ಲ. ಕಳೆದ ಲೋಕಸಭಾ ಚುನಾವಣೆಗೆ ಅಲ್ಪ ಮುನ್ನ, 2024ರ ಮಾರ್ಚ್ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ₹2 ಇಳಿಕೆ ಮಾಡಲಾಗಿತ್ತು. ಇದೀಗ ಬೆನ್ನು ಬೆನ್ನಿಗೆ ನಾಲ್ಕು ಸಲ ಬೆಲೆ ಏರಿಕೆ ಆಗಿರುವುದರಿಂದ ಇಂಧನ ಬೆಲೆ 2022 ಮೇ ಬಳಿಕ ಗರಿಷ್ಠ ಮಟ್ಟ ತಲುಪಿದಂತಾಗಿದೆ.

ಪಶ್ಚಿಮ ಏಷ್ಯಾ ಸಂಘರ್ಷ ಕೊನೆಗೊಳಿಸಲು ಇರಾನ್– ಅಮೆರಿಕ ಒಪ್ಪಂದಕ್ಕೆ ಬರುವ ಸಾಧ್ಯತೆ ಹೆಚ್ಚಿರುವುದರಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿರುವುದರ ನಡುವೆಯೇ, ಈ ಏರಿಕೆ ಕಂಡುಬಂದಿದೆ. ಹೊರ್ಮುಜ್ ಜಲಸಂಧಿಯನ್ನು ಪುನಃ ತೆರೆಯಲು ಅಮೆರಿಕ ಮತ್ತು ಇರಾನ್ ತಾತ್ವಿಕವಾಗಿ ಒಪ್ಪಿಕೊಂಡ ಬಳಿಕ ಬ್ರೆಂಟ್ ಕಚ್ಚಾ ತೈಲ ದರ ಶೇ 5ರಷ್ಟು ಇಳಿಕೆಯಾಗಿದೆ.

ಖಾಸಗಿ ಸ್ವಾಮ್ಯದ ತೈಲೋತ್ಪನ್ನಗಳ ಮಾರಾಟ ಕಂಪನಿಗಳು ಈ ಹಿಂದೆಯೇ ಇಂಧನ ಬೆಲೆ ಹೆಚ್ಚಿಸಿವೆ. ನಯಾರಾ ಎನರ್ಜಿ ಮಾರ್ಚ್ನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಕ್ರಮವಾಗಿ ಲೀಟರಿಗೆ ₹5 ಹಾಗೂ ₹3 ಹೆಚ್ಚಿಸಿದೆ. ಶೆಲ್ ಕಂಪನಿ ಏಪ್ರಿಲ್ನಲ್ಲಿ ಪೆಟ್ರೋಲ್ ಬೆಲೆಯನ್ನು ಲೀಟರಿಗೆ ₹7.41 ಹಾಗೂ ಡೀಸೆಲ್ ಬೆಲೆಯನ್ನು ಲೀಟರಿಗೆ ₹25 ಏರಿಕೆ ಮಾಡಿದೆ.

ಖಾಸಗಿ ವಲಯದ ಜಿಯೊ–ಬಿಪಿ ತನ್ನಲ್ಲಿ ಮಾರಾಟವಾಗುವ ಇಂಧನ ಬೆಲೆಯನ್ನು ಸರ್ಕಾರಿ ಕಂಪನಿಗಳ ಬೆಲೆ ಹೆಚ್ಚಳಕ್ಕೆ ಅನುಗುಣವಾಗಿಯೇ ಏರಿಕೆ ಮಾಡಿದೆ.

ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಫೆಬ್ರುವರಿಯಲ್ಲಿ ಇರಾನ್ ಮೇಲೆ ದಾಳಿ ನಡೆಸಿದ ಬಳಿಕ ಹೊರ್ಮುಜ್ ಜಲಸಂಧಿಯ ಮೂಲಕ ತೈಲ ಸಾಗಾಟಕ್ಕೆ ಅಡ್ಡಿಯಾಗಿದೆ. ಅಲ್ಲಿಂದ ಈಚೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಶೇಕಡಾ 50ಕ್ಕಿಂತ ಏರಿಕೆಯಾಗಿದೆ.

‘ನಷ್ಟ ₹600 ಕೋಟಿಗೆ ಇಳಿಕೆ’

ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಹೆಚ್ಚಿಸಿದ ನಂತರ ಸರ್ಕಾರಿ ಸ್ವಾಮ್ಯದ ತೈಲೋತ್ಪನ್ನಗಳ ಮಾರಾಟ ಕಂಪನಿಗಳ ನಿತ್ಯದ ನಷ್ಟದ ಮೊತ್ತವು ₹600 ಕೋಟಿಗೆ ಇಳಿಕೆ ಆಗಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ತಿಳಿಸಿದ್ದಾರೆ. ದರ ಏರಿಕೆಯ (ಮೇ 15ಕ್ಕೂ ಮುನ್ನ) ಮೊದಲು ಕಂಪನಿಗಳು ನಿತ್ಯ ₹1000 ಕೋಟಿ ನಷ್ಟ ಅನುಭವಿಸುತ್ತಿದ್ದವು.

ಅಬಕಾರಿ ಸುಂಕ ಕಡಿತ: ₹1 ಲಕ್ಷ ಕೋಟಿ ನಷ್ಟ– ನಿರ್ಮಲಾ

ಮುಂಬೈ: ‘ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ (ಎಕ್ಸೈಸ್) ಕಡಿತದಿಂದ ಸರ್ಕಾರಕ್ಕೆ ₹1 ಲಕ್ಷ ಕೋಟಿ ನಷ್ಟ ಉಂಟಾಗಲಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ದೇಶದ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ನ (ಸಿಡ್ಬಿ) 37ನೇ ವಾರ್ಷಿಕ ಕಾರ್ಯಕ್ರಮದಲ್ಲಿ ಸೋಮವಾರ ಅವರು ಮಾತನಾಡಿದರು.

ಪಶ್ಚಿಮ ಏಷ್ಯಾದ ಸಂಘರ್ಷದಿಂದಾಗಿ ‘ಮೂರು ‘ಎಫ್’ಗಳು ಅಂದರೆ ಇಂಧನ ರಸಗೊಬ್ಬರ ಮತ್ತು ವಿದೇಶಿ ವಿನಿಮಯ’ದ ಮೇಲೆ ಗಮನ ಹರಿಸಬೇಕಾಗಿದೆ. ಕಚ್ಚಾ ತೈಲದ ದರ ಏರಿಕೆಯಾಗುತ್ತಿದೆ. ರಸಗೊಬ್ಬರ ದರವು ಊಹಿಸಲಾಗದ ಮಟ್ಟಕ್ಕೆ ತಲುಪಿದೆ. ಚಿನ್ನದ ಬೆಲೆ ಹೆಚ್ಚಳವು ಹಲವಾರು ಸವಾಲಗಳನ್ನು ಸೃಷ್ಟಿಸುತ್ತಿದೆ ಎಂದು ತಿಳಿಸಿದ್ದಾರೆ.

ದೇಶದ ಆರ್ಥಿಕ ಸ್ಥಿತಿ ಇಂದಿಗೂ ಸಕಾರಾತ್ಮಕವಾಗಿದೆ. ದೇಶದ ಜನರಲ್ಲಿ ಅನಗತ್ಯವಾಗಿ ಭಯ ಹುಟ್ಟಿಸುವ ಪ್ರಚಾರವನ್ನು ಸಹಿಸಲಾಗುವುದಿಲ್ಲ. ನಮ್ಮ ಮಾತುಗಳು ಮತ್ತು ಕಾರ್ಯಗಳಿಂದ ಜನರಲ್ಲಿ ಆತ್ಮವಿಶ್ವಾಸ ತುಂಬಬೇಕಾಗಿದೆ ಎಂದಿದ್ದಾರೆ.

ಅಚ್ಛೇ ದಿನ್ ಬದಲು ಜನರಿಗೆ ಟೋಪಿ: ಸಿದ್ದರಾಮಯ್ಯ

ಬಿಜೆಪಿ ಅಧಿಕಾರಕ್ಕೆ ಬಂದರೆ ಗುಜರಾತ್ ಮಾದರಿ ಸರ್ಕಾರ ಬರುತ್ತದೆ. ಅಚ್ಛೇ ದಿನ್ ಬರುತ್ತದೆ ಎಂದು ಹೇಳಿ ಜನರಿಗೆ ಟೋಪಿ ಹಾಕಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೂರಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಇತಿಹಾಸದಲ್ಲೇ ಈ ರೀತಿ ತೈಲ ಬೆಲೆ ಏರಿಕೆ ಆಗಿರಲಿಲ್ಲ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ 2014ರ ಬೆಲೆಗಿಂತ ಈಗ ದುಪ್ಪಟ್ಟು ಹೆಚ್ಚಾಗಿದೆ. ಕಚ್ಚಾ ತೈಲ ಬೆಲೆಯ ಇಳಿಕೆಯ ಲಾಭ ಗ್ರಾಹಕರಿಗೆ ಸಿಕ್ಕಿಲ್ಲ. ಬದಲಿಗೆ ಬೆಲೆ ಏರಿಕೆಯ ಬರೆ ಹಾಕಿದ್ದಾರೆ. ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಸತತವಾಗಿ ಹೆಚ್ಚಳ ಮಾಡುತ್ತಾ ದೇಶ ಹಾಗೂ ಜನಸಾಮಾನ್ಯರನ್ನು ದೋಚುತ್ತಿದ್ದಾರೆ ಎಂದು ದೂರಿದರು.

ದರ ಏರಿಕೆ ಲಾಭ ರಾಜ್ಯ ಸರ್ಕಾರಕ್ಕೆ: ಅಶೋಕ

ಪೆಟ್ರೋಲ್ ದರ ಏರಿಕೆಯಿಂದ ರಾಜ್ಯ ಸರ್ಕಾರ ವರ್ಷಕ್ಕೆ ಹೆಚ್ಚುವರಿಯಾಗಿ ₹6,000 ಕೋಟಿ ಲಾಭ ಮಾಡಿಕೊಳ್ಳುತ್ತಿದೆ ಎಂದು ವಿರೋಧಪಕ್ಷದ ನಾಯಕ ಆರ್.ಅಶೋಕ ದೂರಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಪೆಟ್ರೋಲ್ ಮೇಲೆ ವ್ಯಾಟ್ ಹೆಚ್ಚು ಮಾಡಿದ ಕಾರಣಕ್ಕೆ ಇತರ ರಾಜ್ಯಗಳಿಂತ ಹೆಚ್ಚು ದರವನ್ನು ರಾಜ್ಯದ ಗ್ರಾಹಕರು ತೆರಬೇಕಾಗಿದೆ. ಸರ್ಕಾರ
ವ್ಯಾಟ್ ಕಡಿಮೆ ಮಾಡಿದರೆ ಪೆಟ್ರೋಲ್ ದರ ಇಳಿಕೆಯಾಗುತ್ತದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.