ನವದೆಹಲಿ: ಸತತ ಮೂರನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆ ಕಂಡಿದ್ದು, ತಲಾ 35 ಪೈಸೆ ಏರಿಕೆಯಾಗಿದೆ. ದೇಶದಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಮುಟ್ಟಿದೆ.
ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ, ದೆಹಲಿಯಲ್ಲಿ ಪೆಟ್ರೋಲ್ ಬೆಲೆಯು ತನ್ನ ಅತ್ಯಧಿಕ ಮಟ್ಟವಾದ ₹ 106.89ಕ್ಕೆ ತಲುಪಿದ್ದು, ಮುಂಬೈನಲ್ಲಿ ಪ್ರತಿ ಲೀಟರ್‌ಗೆ ₹112.78 ಆಗಿದೆ.
ಮುಂಬೈನಲ್ಲಿ ಡೀಸೆಲ್ ದರ ₹ 103.63 ಆಗಿದ್ದು, ದೆಹಲಿಯಲ್ಲಿ ₹ 95.62 ಆಗಿದೆ.
ಇನ್ನು, ಬೆಂಗಳೂರಿನಲ್ಲಿ ಪೆಟ್ರೋಲ್ ದರ ₹ 110.61 ಆಗಿದ್ದು, ಡೀಸೆಲ್ ದರ ₹ 101.41 ರಷ್ಟಾಗಿದೆ.
ಅಕ್ಟೋಬರ್ 18 ಮತ್ತು 19 ರಂದು ತೈಲ ದರಗಳಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ, ಅದಕ್ಕೂ ಮುನ್ನ ನಾಲ್ಕು ದಿನ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಹೆಚ್ಚಳವಾಗಿತ್ತು. ಮತ್ತೆ ಅಕ್ಟೋಬರ್ 20ರಿಂದ ಸತತ ಮೂರು ಏರಿಕೆ ದಾಖಲಾಗಿದೆ.
ದೇಶದ ಎಲ್ಲ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ದರ ಈಗಾಗಲೇ ₹ 100 ಅಥವಾ ಅದಕ್ಕಿಂತ ಹೆಚ್ಚಿನ ಮಟ್ಟವನ್ನು ತಲುಪಿದ್ದರೆ, ಡೀಸೆಲ್ ಬೆಲೆ ಒಂದು ಡಜನ್‌ಗಿಂತಲೂ ಹೆಚ್ಚು ರಾಜ್ಯಗಳಲ್ಲಿ 100 ರೂಪಾಯಿ ದಾಟಿದೆ.
ಸ್ಥಳೀಯ ತೆರಿಗೆಗಳ ಮೇಲೆ ರಾಜ್ಯದಿಂದ ರಾಜ್ಯಕ್ಕೆ ತೈಲ ಬೆಲೆ ಭಿನ್ನವಾಗಿರುತ್ತವೆ.
ಸೆಪ್ಟೆಂಬರ್ 28 ರಿಂದ 19 ಬಾರಿ ಪೆಟ್ರೋಲ್ ಬೆಲೆಯನ್ನು ಹೆಚ್ಚಿಸಲಾಗಿದ್ದು, ಒಟ್ಟಾರೆಯಾಗಿ, ಲೀಟರ್‌ಗೆ ₹ 5.7 ಹೆಚ್ಚಳವಾಗಿದೆ. .
ಡೀಸೆಲ್ ದರದಲ್ಲಿ ಸೆಪ್ಟೆಂಬರ್ 24 ರಿಂದ 22 ಬಾರಿ ಏರಿಕೆಯಾಗಿದ್ದು, ಪ್ರತಿ ಲೀಟರ್‌ಗೆ ಒಟ್ಟು ₹ 7 ಹೆಚ್ಚಿಸಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.