ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಗನಮುಖಿಯಾದ ಪೆಟ್ರೋಲ್, ಡೀಸೆಲ್ ದರ: ಇಂದು ಮತ್ತೆ ಏರಿಕೆ

Last Updated 23 ಅಕ್ಟೋಬರ್ 2021, 7:04 IST
ಅಕ್ಷರ ಗಾತ್ರ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೆ ತಡೆಯೇ ಇಲ್ಲದಂತಾಗಿದೆ. ಸತತ ನಾಲ್ಕನೇ ದಿನವೂ ತಲಾ 35 ಪೈಸೆ ಹೆಚ್ಚಳವಾಗಿದೆ.

ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ, ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ಈಗ ₹ 107.24, ಡೀಸೆಲ್ ಬೆಲೆ ₹ 95.97 ಆಗಿದೆ. ಮುಂಬೈನಲ್ಲಿ, ಪ್ರಸ್ತುತ ಪೆಟ್ರೋಲ್ ದರ ಲೀಟರ್‌ಗೆ ₹ 113.12 ಮತ್ತು ಡೀಸೆಲ್ ₹ 104.00 ಆಗಿದೆ. .

ಅದೇ ರೀತಿ ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ₹ 110.98 ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ ₹ 101.86 ಆಗಿದೆ.

ಸ್ಥಳೀಯ ತೆರಿಗೆಗಳನ್ನು ಆಧರಿಸಿ ರಾಜ್ಯದಿಂದ ರಾಜ್ಯಕ್ಕೆ ತೈಲ ಬೆಲೆ ಭಿನ್ನವಾಗಿರುತ್ತದೆ.

ಸೆಪ್ಟೆಂಬರ್ 28 ರಿಂದ 19 ಬಾರಿ ಪೆಟ್ರೋಲ್ ಬೆಲೆಯನ್ನು ಹೆಚ್ಚಿಸಲಾಗಿದ್ದು, ಒಟ್ಟಾರೆಯಾಗಿ, ಲೀಟರ್‌ಗೆ ₹ 5.7 ಹೆಚ್ಚಳವಾಗಿದೆ.

ಇನ್ನು, .ಸೆಪ್ಟೆಂಬರ್ 24 ರಿಂದ 22 ಏರಿಕೆಗಳಲ್ಲಿ ಡೀಸೆಲ್ ದರವನ್ನು ಲೀಟರ್‌ಗೆ ₹ 7 ಗಳಷ್ಟು ಹೆಚ್ಚಿಸಲಾಗಿದೆ.

ಇದಕ್ಕೂ ಮೊದಲು ಮೇ 4 ರಿಂದ ಜುಲೈ 17ರ ನಡುವೆ ಪೆಟ್ರೋಲ್ ದರದಲ್ಲಿ ಲೀಟರ್‌ಗೆ ₹11.44 ಗಳಷ್ಟು ಮತ್ತು ಡೀಸೆಲ್ ದರದಲ್ಲಿ ಲೀಟರ್‌ಗೆ ₹ 9.14 ಹೆಚ್ಚಳ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT