ಆಗಸ್ಟ್‌ನಲ್ಲಿ ಪೆಟ್ರೋಲ್ ಬೇಡಿಕೆ ಹೆಚ್ಚಳ

ನವದೆಹಲಿ: ಆಗಸ್ಟ್‌ನಲ್ಲಿ ಪೆಟ್ರೋಲ್ ಮಾರಾಟ ಹೆಚ್ಚಾಗಿದೆ, ಡೀಸೆಲ್ ಮಾರಾಟ ಇಳಿಕೆ ಕಂಡಿದೆ ಎಂದು ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಪ್ರಾಥಮಿಕ ಮಾಹಿತಿ ನೀಡಿವೆ.
ಪೆಟ್ರೋಲ್ ಮಾರಾಟವು ಈಗಾಗಲೇ ಕೋವಿಡ್ ಪೂರ್ವದ ಮಟ್ಟಕ್ಕೆ ಬಂದಿದೆ. ಡೀಸೆಲ್ ಮಾರಾಟ ಇಳಿಕೆ ಕಾಣುತ್ತಲೇ ಇದೆ ಎಂದು ಅವು ಹೇಳಿವೆ.
ಸರ್ಕಾರಿ ಸ್ವಾಮ್ಯದ ತೈಲ ಮಾರಾಟಗಾರರು ಆಗಸ್ಟ್‌ನಲ್ಲಿ 24.3 ಲಕ್ಷ ಟನ್ ಪೆಟ್ರೋಲ್ ಮಾರಾಟ ಮಾಡಿದ್ದು, ಹಿಂದಿನ ವರ್ಷದ ಆಗಸ್ಟ್‌ಗೆ ಹೋಲಿಸಿದರೆ ಮಾರಾಟವು ಶೇಕಡ 13.6ರಷ್ಟು ಹೆಚ್ಚಾಗಿದೆ. ಕೋವಿಡ್‌ಗೂ ಮುಂಚಿನ ಮಟ್ಟಕ್ಕೆ ಹೋಲಿಸಿದರೆ ಶೇ 4.1ರಷ್ಟು ಹೆಚ್ಚಿಗೆ ಇದೆ.
ಇದನ್ನೂ ಓದಿ: ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ ದರ ₹ 25 ಏರಿಕೆ
ಡೀಸೆಲ್ ಮಾರಾಟವು ಕಳೆದ ವರ್ಷದ ಆಗಸ್ಟ್‌ಗೆ ಹೋಲಿಸಿದರೆ ಈ ವರ್ಷದ ಆಗಸ್ಟ್‌ನಲ್ಲಿ ಶೇ 15.9ರಷ್ಟು ಹೆಚ್ಚಾಗಿದ್ದು 49.4 ಲಕ್ಷ ಟನ್‌ಗಳಷ್ಟಾಗಿದೆ. ಆಗದರೆ 2019ರ ಆಗಸ್ಟ್‌ಗೆ ಹೋಲಿಸಿದರೆ ಶೇ 9.8ರಷ್ಟು ಇಳಿಕೆ ಕಂಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.