ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಇಳಿಕೆ

Last Updated 25 ಜನವರಿ 2020, 19:41 IST
ಅಕ್ಷರ ಗಾತ್ರ

ಬೆಂಗಳೂರು: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದಲ್ಲಿನ ಇಳಿಕೆಯಿಂದಾಗಿ ದೇಶದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರದಲ್ಲಿಯೂ ಅಲ್ಪ ಇಳಿಕೆ ಕಂಡುಬರುತ್ತಿದೆ.

ಶನಿವಾರ ಪ್ರತಿ ಲೀಟರ್ ಪೆಟ್ರೋಲ್‌ ದರ 28 ಪೈಸೆ ಇಳಿಕೆಯಾಗಿ ₹ 76.64ರಂತೆ ಹಾಗೂ ಡೀಸೆಲ್‌ ದರ 31 ಪೈಸೆ ಇಳಿಕೆಯಾಗಿದ್ದು, ₹ 69.55ರಂತೆ ಮಾರಾಟವಾಗಿದೆ.

ಒಂದು ವಾರದಲ್ಲಿ ಬ್ರೆಂಟ್ ತೈಲ ದರ ಬ್ಯಾರಲ್‌ಗೆ 65.21 ಡಾಲರ್‌ಗಳಿಂದ 61.65 ಡಾಲರ್‌ಗಳಿಗೆ ಅಂದರೆ, 3.56 ಡಾಲರ್‌ಗಳಷ್ಟು ಇಳಿಕೆಯಾಗಿದೆ. ಆದರೆ, ಪೆಟ್ರೋಲ್‌ ದರ ಲೀಟರಿಗೆ 85 ಪೈಸೆ ಹಾಗೂ ಡೀಸೆಲ್‌ ದರ 98 ಪೈಸೆಗಳಷ್ಟು ಅಲ್ಪ ಇಳಿಕೆಯನ್ನಷ್ಟೇ ಕಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT