ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಪ್ರದೇಶದಲ್ಲಿ ಲೀಟರ್‌ಗೆ ₹ 120 ದಾಟಿದ ಪೆಟ್ರೋಲ್‌ ದರ!

Last Updated 31 ಅಕ್ಟೋಬರ್ 2021, 12:16 IST
ಅಕ್ಷರ ಗಾತ್ರ

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಪೆಟ್ರೋಲ್‌ ಮತ್ತು ಡೀಸೆಲ್ ದರವನ್ನು ಭಾನುವಾರ ತಲಾ 35 ಪೈಸೆ ಹೆಚ್ಚಿಸಿವೆ.

ಇದರಿಂದಾಗಿ ಮಧ್ಯಪ್ರದೇಶದ ಪನ್ನಾ, ಸತ್ನಾ, ರೇವಾ, ಶಹದೋಲ್, ಛಿಂದ್ವಾರಾ ಮತ್ತು ಬಾಲಘಾಟ್ ಪ್ರದೇಶಗಳಲ್ಲಿ ಪೆಟ್ರೋಲ್‌ ದರವು ಲೀಟರಿಗೆ ₹ 120ರ ಗಡಿಯನ್ನು ದಾಟಿದೆ.

ರಾಜಸ್ಥಾನದ ಗಂಗಾನಗರದಲ್ಲಿ ಪೆಟ್ರೋಲ್‌ ದರವು ದೇಶದಲ್ಲಿಯೇ ಅತ್ಯಂತ ಗರಿಷ್ಠ ಮಟ್ಟದಲ್ಲಿದೆ. ಭಾನುವಾರ ಲೀಟರಿಗೆ ₹ 121.52 ರಷ್ಟಾಗಿದೆ. ಡೀಸೆಲ್‌ ದರವು ₹ 112.44 ರಷ್ಟಿದೆ.

ಬೆಂಗಳೂರಿನಲ್ಲಿ ಶನಿವಾರ ಪೆಟ್ರೋಲ್‌ ದರ ಲೀಟರಿಗೆ ₹111.1ಕ್ಕೆ ಮತ್ತು ಡೀಸೆಲ್‌ ದರ ಲೀಟರಿಗೆ 37 ಪೈಸೆ ಹೆಚ್ಚಾಗಿ ₹ 104.03ಕ್ಕೆ ಏರಿಕೆ ಆಗಿದೆ.

ಸೆಪ್ಟೆಂಬರ್‌ 28ರಿಂದ ಈವರೆಗೆ ಪೆಟ್ರೋಲ್‌ ದರವನ್ನು 25 ಬಾರಿ ಹೆಚ್ಚಿಸಲಾಗಿದ್ದು, ಈ ಅವಧಿಯಲ್ಲಿ ಲೀಟರಿಗೆ ₹ 8.15ರಷ್ಟು ಏರಿಕೆ ಆಗಿದೆ. ಡೀಸೆಲ್‌ ದರವನ್ನು ಸೆಪ್ಟೆಂಬರ್‌ 24ರಿಂದ ಈವರೆಗೆ ಒಟ್ಟು 28 ಬಾರಿ ಹೆಚ್ಚಿಸಲಾಗಿದ್ದು, ಲೀಟರಿಗೆ ₹ 9.45ರಷ್ಟು ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT