ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತತ 4ನೇ ದಿನವೂ ಇಂಧನ ದರ ಹೆಚ್ಚಳ: ರಾಜಸ್ಥಾನದಲ್ಲಿ ಲೀಟರ್ ಪೆಟ್ರೋಲ್ ಬೆಲೆ ₹ 121

Last Updated 31 ಅಕ್ಟೋಬರ್ 2021, 6:53 IST
ಅಕ್ಷರ ಗಾತ್ರ

ನವದೆಹಲಿ: ಪೆಟ್ರೋಲ್‌ ಹಾಗೂ ಡೀಸೆಲ್‌ ದರಗಳನ್ನು ಭಾನುವಾರ ತಲಾ 35 ಪೈಸೆಗಳಷ್ಟು ಹೆಚ್ಚಿಸಲಾಗಿದೆ. ಇದರಿಂದ ದೇಶದಾದ್ಯಂತ ಸತತ ನಾಲ್ಕನೇ ದಿನವೂ ಇಂಧನ ದರಗಳನ್ನು ಹೆಚ್ಚಿಸಿದಂತಾಗಿದೆ.

ಸ್ಥಳೀಯ ಮಾರಾಟ ತೆರಿಗೆಗಳನ್ನು ಪರಿಗಣಿಸಿದಾಗ ಇಂಧನ ದರ ₹ 120ರ ಗಡಿ ದಾಟಿದ ರಾಜ್ಯಗಳ ಸಾಲಿಗೆ ಈಗ ಮಧ್ಯಪ್ರದೇಶವೂ ಸೇರಿದಂತಾಗಿದೆ. ರಾಜ್ಯದ ಪನ್ನಾ, ಸಾತ್ನಾ, ರೇವಾ, ಶಾದೂಲ್‌, ಛಿಂದ್ವಾರ ಹಾಗೂ ಬಾಲಾಘಾಟ್‌ಗಳಲ್ಲಿ ಪ್ರತಿ ಲೀಟರ್‌ ದರ ₹ 120 ದಾಟಿದೆ.

ರಾಜಸ್ಥಾನದ ಗಂಗಾನಗರ ಹಾಗೂ ಹನುಮಾನ್‌ಗಡ ಪಟ್ಟಣಗಳಲ್ಲಿ ಇಂಧನ ದರ ದೇಶದಲ್ಲಿಯೇ ಗರಿಷ್ಠ ಮಟ್ಟ ತಲುಪಿದೆ. ಗಂಗಾನಗರದಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ನ ಪ್ರತಿ ಲೀಟರ್‌ ದರ ಕ್ರಮವಾಗಿ ₹ 121.52 ಹಾಗೂ ₹ 112.44 ಇದೆ.

ದೆಹಲಿಯಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರ ₹ 109.34, ಪ್ರತಿ ಲೀಟರ್‌ ಡೀಸೆಲ್‌ ದರ ₹ 98.07 ತಲುಪಿದೆ. ಮುಂಬೈನಲ್ಲಿ ಕ್ರಮವಾಗಿ ₹ 115.15 ಹಾಗೂ ₹ 106.23 ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT