ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲೆಷ್ಟಿದೆ ದರ?

Last Updated 27 ಅಕ್ಟೋಬರ್ 2021, 4:12 IST
ಅಕ್ಷರ ಗಾತ್ರ

ನವದೆಹಲಿ: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಬುಧವಾರ ಮತ್ತೆ ಪ್ರತಿ ಲೀಟರ್‌ಗೆ 35 ಪೈಸೆ ಏರಿಕೆಯಾಗಿದೆ. ಇದರೊಂದಿಗೆ ಇಂಧನ ದರ ಈವರೆಗಿನ ಗರಿಷ್ಠಮಟ್ಟ ತಲುಪಿದೆ.

ನವದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹107.94 ಆಗಿದ್ದು, ಡೀಸೆಲ್ ದರ ₹96.67ಕ್ಕೆ ತಲುಪಿದೆ. ಮುಂಬೈಯಲ್ಲಿ ಪೆಟ್ರೋಲ್ ಬೆಲೆ ₹113.80 ಹಾಗೂ ಡೀಸೆಲ್ ಬೆಲೆ ₹104.75 ಆಗಿದೆ.

ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹111.70 ಆಗಿದ್ದು, ಡೀಸೆಲ್ ದರ ₹102.60 ಆಗಿದೆ.

ಕೋಲ್ಕತ್ತದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹108.45 ಹಾಗೂ ಡೀಸೆಲ್ ದರ ₹99.78 ಆಗಿದೆ.

ಚೆನ್ನೈಯಲ್ಲಿ ಪೆಟ್ರೋಲ್ ಬೆಲೆ ₹104.83 ಮತ್ತು ಡೀಸೆಲ್ ಬೆಲೆ ₹100.92 ಆಗಿದೆ.

ಈ ಹಿಂದೆ ಅಕ್ಟೋಬರ್ 24ರಂದು ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT