ಬುಧವಾರ, ಆಗಸ್ಟ್ 4, 2021
24 °C

5ನೇ ದಿನವೂ ಪೆಟ್ರೋಲ್‌, ಡೀಸೆಲ್‌ ದರ ಬದಲಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮೂರು ವಾರಗಳ ಬಳಿಕ ಇದೀಗ ಇಂಧನ ದರ ಏರಿಕೆಗೆ ತುಸು ಕಡಿವಾಣ ಬಿದ್ದಿದೆ. ಕಳೆದ ಐದು ದಿನಗಳಿಂದ ಪೆಟ್ರೋಲ್‌ ಡೀಸೆಲ್‌ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಜೂನ್‌ 7ರಿಂದ 29ರವರೆಗೆ ಇಂಧನ ದರದಲ್ಲಿ ಏರಿಕೆ ಮಾಡಿವೆ. ಡೀಸೆಲ್‌ ದರ ಒಟ್ಟಾರೆ 22 ಬಾರಿ ಮತ್ತು ಪೆಟ್ರೊಲ್‌ ದರ 21 ಬಾರಿ ಹೆಚ್ಚಾಗಿದೆ.

ಬೆಂಗಳೂರಿನಲ್ಲಿ ಸದ್ಯ ಒಂದು ಲೀಟರ್ ಪೆಟ್ರೋಲ್ ದರ ₹ 83.04 ಹಾಗೂ ಡೀಸೆಲ್‌ ದರ ₹ 76.58ರಷ್ಟಿದೆ. ಮುಂಬೈನಲ್ಲಿ ಪೆಟ್ರೋಲ್‌ ₹ 87.19 ಮತ್ತು ಡೀಸೆಲ್‌ ₹ 78.83, ದೆಹಲಿಯಲ್ಲಿ ಪೆಟ್ರೋಲ್ ₹ 80.43 ಮತ್ತು ಡೀಸೆಲ್‌ ₹80.53ರಂತೆ ಮಾರಾಟವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು