ಗುರುವಾರ , ಡಿಸೆಂಬರ್ 12, 2019
26 °C

ಪೆಟ್ರೋಲ್‌, ಡೀಸೆಲ್‌ ದರ ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ತಗ್ಗುತ್ತಿದೆ. ಹೀಗಾಗಿ ದೇಶದಲ್ಲಿ ಪೆಟ್ರೋಲ್‌, ಡೀಸೆಲ್‌ ದರಗಳು ಇಳಿಕೆ ಕಾಣಲಾರಂಭಿಸಿವೆ.

ಬೆಂಗಳೂರಿನಲ್ಲಿ ಶನಿವಾರ ಲೀಟರ್ ಪೆಟ್ರೋಲ್‌ ದರ 35 ಪೈಸೆ ಕಡಿಮೆಯಾಗಿ ₹ 73.09ಕ್ಕೆ ಹಾಗೂ ಡೀಸೆಲ್‌ ದರ 37 ಪೈಸೆ ಕಡಿಮೆಯಾಗಿ ₹ 67.70ಕ್ಕೆ ಇಳಿಕೆಯಾಗಿದೆ. 

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಒಂದು ವಾರದಲ್ಲಿ ಅಂದರೆ ನವೆಂಬರ್‌ 25 ರಿಂದ ಡಿಸೆಂಬರ್‌ 1 ರವರೆಗೆ ಪ್ರತಿ ಲೀಟರ್ ಪೆಟ್ರೋಲ್‌ ದರ ₹ 2.34 ಹಾಗೂ ಡೀಸೆಲ್‌ ದರ ₹ 2.37 ಇಳಿಕೆ ಮಾಡಿವೆ. ಅಕ್ಟೋಬರ್‌ ತಿಂಗಳ ಬಳಿಕ ಇಂಧನ ದರಗಳು ಇಳಿಮುಖವಾಗಿವೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು