ಪೆಟ್ರೋಲ್‌, ಡೀಸೆಲ್‌ ದರ ಏರಿಕೆ

ಸೋಮವಾರ, ಮಾರ್ಚ್ 25, 2019
23 °C

ಪೆಟ್ರೋಲ್‌, ಡೀಸೆಲ್‌ ದರ ಏರಿಕೆ

Published:
Updated:
Prajavani

ಬೆಂಗಳೂರು: ದೇಶದಾದ್ಯಂತ ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳು ಸತತವಾಗಿ ಏರಿಕೆಯಾಗುತ್ತಲೇ ಇವೆ.

ಬೆಂಗಳೂರಿನಲ್ಲಿ ಶನಿವಾರ ಪ್ರತಿ ಲೀಟರ್ ಪೆಟ್ರೋಲ್‌ ದರ 13 ಪೈಸೆ ಮತ್ತು ಡೀಸೆಲ್‌ ದರ 15 ಪೈಸೆ ಹೆಚ್ಚಾಗಿದ್ದು, ಕ್ರಮವಾಗಿ ₹ 74.33 ಮತ್ತು ₹ 69.50ರಂತೆ ಮಾರಾಟವಾಗಿವೆ.

2019ರ ಜನವರಿ 1 ರಿಂದ ಮಾರ್ಚ್‌ 2ರವರೆಗೆ ಪ್ರತಿ ಲೀಟರ್ ಪೆಟ್ರೋಲ್‌ ದರ ₹ 5.12 ಮತ್ತು ಡೀಸೆಲ್‌ ದರ ₹ 6.49ರಷ್ಟು ಏರಿಕೆಯಾಗಿವೆ.

ಅಂತರರಾಷ್ಟ್ರೀಯ ಮಾರುಕಟ್ಟೆ ಯಲ್ಲಿ ಕಚ್ಚಾ ತೈಲ ದರ ಏರಿಕೆಗೆ ಅನುಗುಣವಾಗಿ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಇಂಧನ ದರದಲ್ಲಿ ಬದಲಾವಣೆ ಮಾಡುತ್ತಿವೆ.

2019ರ ಜನವರಿಯಲ್ಲಿ ಬ್ರೆಂಟ್‌ ಕಚ್ಚಾ ತೈಲ ದರ ಒಂದು ಬ್ಯಾರೆಲ್‌ಗೆ 54.06 ಡಾಲರ್‌ಗಳಷ್ಟಿತ್ತು. ಸದ್ಯ, ಒಂದು ಬ್ಯಾರೆಲ್‌ಗೆ 66 ಡಾಲರ್‌ಗಳಂತೆ ಮಾರಾಟವಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !