ಮಂಗಳವಾರ, ನವೆಂಬರ್ 12, 2019
28 °C

ಪೆಟ್ರೋಲ್‌, ಡೀಸೆಲ್‌ ದರ ಏರಿಕೆ

Published:
Updated:
Prajavani

ಬೆಂಗಳೂರು: ಸೌದಿ ಅರೇಬಿಯಾದಲ್ಲಿ ಉಂಟಾಗಿರುವ ಕಚ್ಚಾ ತೈಲ ಬಿಕ್ಕಟ್ಟಿನಿಂದಾಗಿ ಭಾರತದಲ್ಲಿ ಪೆಟ್ರೋಲ್‌, ಡೀಸೆಲ್ ಬೆಲೆ ಏರುಗತಿಯಲ್ಲಿ ಸಾಗಿದೆ.

ಬುಧವಾರ ಬೆಂಗಳೂರಿನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಕ್ರಮವಾಗಿ 26 ಪೈಸೆ ಮತ್ತು 25 ಪೈಸೆ ಹೆಚ್ಚಾಗಿದೆ. ಎರಡು ದಿನಗಳಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ 40 ಪೈಸೆಗಳಷ್ಟು ಏರಿಕೆಯಾಗಿದೆ. ಇದರಿಂದ ಪೆಟ್ರೋಲ್‌ ಬೆಲೆ ₹ 74.89 ಮತ್ತು ಡೀಸೆಲ್‌ ಬೆಲೆ ₹ 68.06ಕ್ಕೆ ತಲುಪಿದೆ.

ಸೌದಿ ಅರೇಬಿಯಾದ ತೈಲಾಗಾರಗಳ ಮೇಲೆ ಡ್ರೋನ್‌ ದಾಳಿ ನಡೆದಾಗಿನಿಂದ ಇಲ್ಲಿಯವರೆಗೆ ಅಂದರೆ ಬುಧವಾರದವರೆಗೆ ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆ 55 ಪೈಸೆ ಮತ್ತು ಡೀಸೆಲ್‌ ಬೆಲೆ 56 ಪೈಸೆ ಏರಿಕೆಯಾಗಿದೆ.

ತೈಲ ಬಿಕ್ಕಟ್ಟು ನಿಯಂತ್ರಣಕ್ಕೆ ಬರುತ್ತಿದೆ ಎಂದು ಸೌದಿ ಅರೇಬಿಯಾ ಹೇಳಿರುವುದರಿಂದ ಬುಧವಾರ ತೈಲ ದರಗಳಲ್ಲಿ ಅಲ್ಪ ಇಳಿಕೆ ಕಂಡಿತು. ಬ್ರೆಂಟ್‌ ಕಚ್ಚಾ ತೈಲ ದರ ಶೇ 0.95ರಷ್ಟು ಇಳಿಕೆಯಾಗಿ ಒಂದು ಬ್ಯಾರೆಲ್‌ಗೆ 63.94 ಡಾಲರ್‌ಗಳಂತೆ ಮಾರಾಟವಾಯಿತು. 

ಷೇರು ಮೌಲ್ಯ ಹೆಚ್ಚಳ: ತೈಲ ದರ ಇಳಿಕೆಯಿಂದ ದೇಶದ ತೈಲ ಮಾರಾಟ ಕಂಪನಿಗಳ ಷೇರುಗಳ ಬೆಲೆ ಶೇ 3.6ರವರೆಗೂ ಏರಿಕೆ ಕಂಡಿದೆ. 

ಬಿಪಿಸಿಎಲ್‌ ಷೇರುಗಳ ಬೆಲೆ ಶೇ 3.65ರಷ್ಟು, ಎಚ್‌ಪಿಸಿಎಲ್‌ (ಶೇ 3.64) ಮತ್ತು ಇಂಡಿಯನ್ ಆಯಿಲ್‌ (ಶೇ 2.68) ಷೇರುಗಳ ಬೆಲೆಯಲ್ಲಿ ಏರಿಕೆ ಕಂಡಿದೆ.

ಪ್ರತಿಕ್ರಿಯಿಸಿ (+)