ಶನಿವಾರ, ಅಕ್ಟೋಬರ್ 19, 2019
27 °C

ಏರುತ್ತಲೇ ಇದೆ ಪೆಟ್ರೋಲ್‌, ಡೀಸೆಲ್‌ ದರ

Published:
Updated:

ಬೆಂಗಳೂರು: ಸೌದಿ ಅರೇಬಿಯಾದಲ್ಲಿ ಉಂಟಾಗಿರುವ ಕಚ್ಚಾ ತೈಲ ಬಿಕ್ಕಟ್ಟಿನಿಂದಾಗಿ ಭಾರತದಲ್ಲಿ ಪೆಟ್ರೋಲ್‌, ಡೀಸೆಲ್ ದರದಲ್ಲಿ ಏರಿಕೆಯಾಗುತ್ತಿದೆ. ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಸತತ ಆರನೇ ದಿನವೂ ಇಂಧನ ದರದಲ್ಲಿ ಏರಿಕೆ ಮಾಡಿವೆ.

ಬೆಂಗಳೂರಿನಲ್ಲಿ ಭಾನುವಾರ ಪ್ರತಿ ಲೀಟರ್‌ ಪೆಟ್ರೋಲ್‌ ದರ 28ಪೈಸೆ ಹೆಚ್ಚಾಗಿ ₹76.14 ಮತ್ತು ಡೀಸೆಲ್‌ ದರ 21ಪೈಸೆ ಹೆಚ್ಚಾಗಿ ₹69.01ರಂತೆ ಮಾರಾಟವಾಯಿತು.

ಸೌದಿ ಅರೇಬಿಯಾದ ತೈಲಾಗಾರಗಳ ಮೇಲೆ ಡ್ರೋನ್‌ ದಾಳಿ ನಡೆದಾಗಿನಿಂದ ಇಲ್ಲಿಯವರೆಗೆ ಅಂದರೆ, ಭಾನುವಾರದವರೆಗೆ ಪ್ರತಿ ಲೀಟರ್‌ ಪೆಟ್ರೋಲ್‌ ಮತ್ತು ಡೀಸೆಲ್‌ ದರದಲ್ಲಿ ಕ್ರಮವಾಗಿ ₹2.1 ಮತ್ತು ₹1.71ರಂತೆ ಏರಿಕೆಯಾಗಿದೆ.

Post Comments (+)