ಸೋಮವಾರ, ಜುಲೈ 4, 2022
25 °C

ತೈಲ ದರ ಮತ್ತೆ ಏರಿಕೆ: ದೆಹಲಿಯಲ್ಲಿ ₹ 100  ಗಡಿ ದಾಟಿದ ಪೆಟ್ರೋಲ್

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಕಳೆದ ಎಂಟು ದಿನಗಳಲ್ಲಿ 7ನೇ ಬಾರಿಗೆ ದರ ಏರಿಕೆ ಮಾಡಿವೆ. ಇದರೊಂದಿಗೆ ಈ ವಾರವೊಂದರಲ್ಲೇ ತೈಲ ದರ ಪ್ರತಿ ಲೀಟರ್‌ಗೆ ₹ 4.80 ರಷ್ಟು ಏರಿಕೆಯಾದಂತಾಗಿದೆ.

ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್‌ ದರವು ಪ್ರತಿ ಲೀಟರ್‌ಗೆ ಕ್ರಮವಾಗಿ 80 ಪೈಸೆ ಮತ್ತು 70 ಪೈಸೆ ಏರಿಕೆಯಾಗಿದೆ. ಹೀಗಾಗಿ ಲೀಟರ್‌ ಪೆಟ್ರೋಲ್ ₹ 100.21 ಹಾಗೂ ಲೀಟರ್‌ ಡೀಸೆಲ್‌ ₹ 90.77ಕ್ಕೆ ತಲುಪಿದೆ.

ಮುಂಬೈನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್ ಹಾಗೂ ಡೀಸೆಲ್ ಕ್ರಮವಾಗಿ 85 ಪೈಸೆ, 75 ಪೈಸೆ ಏರಿಕೆಯಾಗಿದೆ. ಪೆಟ್ರೋಲ್‌ ₹ 115.04 ಮತ್ತು ಡೀಸೆಲ್‌ ₹ 99.25ಕ್ಕೆ ತಲುಪಿದೆ.

ಚೆನ್ನೈನಲ್ಲಿ ಪೆಟ್ರೋಲ್‌ 76 ಪೈಸೆ ಏರಿಕೆಯೊಂದಿಗೆ ₹ 105.94 ಮತ್ತು ಡೀಸೆಲ್ 67 ಪೈಸೆಯೊಂದಿಗೆ ₹ 96ಕ್ಕೆ ತಲುಪಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್‌ 83 ಪೈಸೆ ಏರಿಕೆಯೊಂದಿಗೆ ₹ 109.68 ಹಾಗೂ ಡೀಸೆಲ್ 67 ಪೈಸೆ ಪೈಸೆಯೊಂದಿಗೆ ₹ 94.62ಕ್ಕೆ ಹೆಚ್ಚಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು