ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆ ಉಳಿಸಲು ಫೋನ್‌ಪೇ ನೆರವು

ಮ್ಯೂಚುವಲ್‌ ಫಂಡ್ಸ್‌ ಹೂಡಿಕೆಗೆ ಸರಳ ವಿಧಾನ
Last Updated 26 ಜನವರಿ 2020, 19:45 IST
ಅಕ್ಷರ ಗಾತ್ರ

ಬೆಂಗಳೂರು: ಹಣಕಾಸು ವರ್ಷದ ಕೊನೆಯಲ್ಲಿ ತೆರಿಗೆ ಉಳಿಸಲು ಹವಣಿಸುವವರ ಅನುಕೂಲಕ್ಕಾಗಿ ಮೊಬೈಲ್‌ ವಾಲೆಟ್‌ ಫೋನ್‌ ಪೇ, ಮ್ಯೂಚುವಲ್‌ ಫಂಡ್ಸ್‌ಗಳಲ್ಲಿ ಹಣ ತೊಡಗಿಸುವ ಸರಳ ಸೌಲಭ್ಯ ಕಲ್ಪಿಸಿದೆ.

‘ವರ್ಷಾಂತ್ಯದಲ್ಲಿ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್‌ 80ಸಿ ಅಡಿಯಲ್ಲಿ ತೆರಿಗೆ ಉಳಿಸಲು ಅವಸರ ಮಾಡುವವರು ಸರಿಯಾದ ನಿರ್ಧಾರಕ್ಕೆ ಬರುವಲ್ಲಿ ವಿಫಲರಾಗುತ್ತಾರೆ. ಕೊನೆ ಕ್ಷಣದಲ್ಲಿ ಅನುಕೂಲಕರವೆಂದು ಮೇಲ್ನೋಟಕ್ಕೆ ಕಾಣಿಸುವ ಹೂಡಿಕೆ ಆಯ್ಕೆ ಮಾಡಿಕೊಂಡು ಪರಿತಪಿಸುತ್ತಾರೆ. ತೆರಿಗೆದಾರರು ಎದುರಿಸುವ ಈ ಬಗೆಯ ಸಮಸ್ಯೆಗಳಿಗೆ ಇಲ್ಲಿ ಸರಳ ಪರಿಹಾರ ಒದಗಿಸಲಾಗಿದೆ’ ಎಂದು ಕಂಪನಿಯ ಮ್ಯೂಚುವಲ್‌ ಫಂಡ್ಸ್ ಮುಖ್ಯಸ್ಥ ಟೆರೆನ್ಸ್‌ ಲುಸಿಯನ್ಸ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಐದು ಸರಳ ಹಂತಗಳಲ್ಲಿ ಮ್ಯೂಚುವಲ್ ಫಂಡ್ಸ್‌ಗಳಲ್ಲಿ ಗರಿಷ್ಠ ₹ 1.5 ಲಕ್ಷದವರೆಗೆ ಹಣ ತೊಡಗಿಸಿ ₹ 46,800ರಷ್ಟು ಮೊತ್ತದಷ್ಟು ತೆರಿಗೆ ಉಳಿತಾಯ ಮಾಡಬಹುದು. ಆದಿತ್ಯ ಬಿರ್ಲಾ, ಡಿಎಸ್‌ಪಿ ಮತ್ತು ಐಸಿಐಸಿಐ ಪ್ರುಡೆನ್ಶಿಯಲ್‌ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆಗೆ ಅವಕಾಶ ಕಲ್ಪಿಸಲಾಗಿದೆ. ಇನ್ನಷ್ಟು ಫಂಡ್ಸ್‌ಗಳನ್ನು ಸೇರ್ಪಡೆಗೊಳಿಸಲಾಗುವುದು. ತಿಳಿಯಿರಿ ನಿಮ್ಮ ಗ್ರಾಹಕರು (ಕೆವೈಸಿ) ಪ್ರಕ್ರಿಯೆ ಪೂರ್ಣಗೊಳಿಸದವರೂ ಆಧಾರ್‌, ವಾಹನ ಚಾಲನಾ ಲೈಸೆನ್ಸ್‌, ಮತದಾರರ ಗುರುತಿನ ಚೀಟಿ ಅಥವಾ ಪಾಸ್‌ಪೋರ್ಟ್‌ ದಾಖಲೆ ಸಲ್ಲಿಸಿ ಇದನ್ನು ಪೂರ್ಣಗೊಳಿಸಬಹುದು.

‘ಆ್ಯಪ್‌ನಲ್ಲಿ ಇರುವ ವಿಡಿಯೊ ಹೂಡಿಕೆದಾರರಿಗೆ ನೆರವಾಗಲಿದೆ. ಒಂದು ಬಾರಿಗೆ ಹಣ ತೊಡಗಿಸಿ ತೆರಿಗೆ ಉಳಿಸಬಹುದು. ವ್ಯವಸ್ಥಿತ ಹೂಡಿಕೆ ಯೋಜನೆ (SIP) ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನೂ ಒದಗಿಸಲಾಗಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT