ನವದೆಹಲಿ: ಪಿಎಂ ಇ–ಡ್ರೈವ್ ಯೋಜನೆಯನ್ನು ಕೇಂದ್ರ ಸರ್ಕಾರ ಪರಿಷ್ಕರಿಸಿದ್ದು, ಇ–ಸ್ಕೂಟರ್ ಮತ್ತು ಇ–ಆಟೊರಿಕ್ಷಾಗಳ ನೋಂದಣಿಗೆ ಸಂಬಂಧಿಸಿದಂತೆ ಹೊಸ ಗಡುವನ್ನು ನಿಗದಿಪಡಿಸಿದೆ.

ದೇಶದಲ್ಲಿ ವಿದ್ಯುತ್ ಚಾಲಿತ ವಾಹನಗಳಿಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ‘ಪಿಎಂ ಇ–ಡ್ರೈವ್’ ಯೋಜನೆಯನ್ನು ರೂಪಿಸಿದೆ. ಇದರಡಿ ವಿದ್ಯುತ್ಚಾಲಿತ ವಾಹನಗಳಿಗೆ ಅವುಗಳ ಬ್ಯಾಟರಿ ಸಾಮರ್ಥ್ಯ ಆಧಾರದ ಮೇಲೆ ಸಬ್ಸಿಡಿ ದೊರೆಯಲಿದೆ. ಇದಕ್ಕಾಗಿ ₹10,900 ಕೋಟಿ ಮೀಸಲಿಡಲಾಗಿದೆ.

ಪರಿಷ್ಕೃತ ಮಾರ್ಗಸೂಚಿಗಳ ಪ್ರಕಾರ, ಪ್ರಸಕ್ತ ವರ್ಷದ ಜುಲೈ 31ರವರೆಗೆ ನೋಂದಾಯಿಸಲಾದ ವಿದ್ಯುತ್ಚಾಲಿತ ದ್ವಿಚಕ್ರ ವಾಹನಗಳು ಮತ್ತು 2028ರ ಮಾರ್ಚ್ 31ರವರೆಗೆ ನೋಂದಾಯಿಸಲಾದ ವಿದ್ಯುತ್ಚಾಲಿತ ತ್ರಿಚಕ್ರ ವಾಹನಗಳು ಪ್ರೋತ್ಸಾಹ ಧನಕ್ಕೆ ಅರ್ಹವಾಗಿರುತ್ತವೆ.

ಪಿಎಂ ಇ–ಡ್ರೈವ್ ಯೋಜನೆಯು ನಿಧಿ ಸೀಮಿತ ಯೋಜನೆ ಆಗಿದೆ. ಈ ಯೋಜನೆಯ ಅವಧಿ ಮೊದಲೇ (2028ರ ಮಾರ್ಚ್ 31) ಇದರ ಮೊತ್ತವು (₹10,900 ಕೋಟಿ) ಖಾಲಿಯಾದರೆ ಯೋಜನೆ ಮುಕ್ತಾಯಗೊಳ್ಳಲಿದೆ. ಬಳಿಕ ಪ್ರೋತ್ಸಾಹ ಧನಕ್ಕೆ ಪರಿಗಣಿಸಲಾಗುವುದಿಲ್ಲ ಎಂದು ಕೇಂದ್ರ ಭಾರಿ ಕೈಗಾರಿಕೆ ಸಚಿವಾಲಯ ತಿಳಿಸಿದೆ.

ಈ ಯೋಜನೆಯಡಿ 24.79 ಲಕ್ಷ ವಿದ್ಯುತ್ಚಾಲಿತ ದ್ವಿಚಕ್ರವಾಹನಗಳು ಮತ್ತು 39,034 ಇ– ಆಟೊರಿಕ್ಷಾಗಳಿಗೆ ಸಬ್ಸಿಡಿ ನೀಡುವ ಗುರಿಯನ್ನು ಸರ್ಕಾರ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.