ನವದೆಹಲಿ: ಕೊಳವೆ ಮೂಲಕ ನೈಸರ್ಗಿಕ ಅನಿಲ (ಪಿಎನ್ಜಿ) ಪೂರೈಕೆಗೆ ಇನ್ನಷ್ಟು ಒತ್ತು ನೀಡಲು ಕೇಂದ್ರ ಸರ್ಕಾರ ಆರಂಭಿಸಿದ್ದು, ಮಾರ್ಚ್ನಿಂದ ಇದುವರೆಗೆ 5.01 ಲಕ್ಷಕ್ಕಿಂತ ಹೆಚ್ಚಿನ ಸಂಪರ್ಕಗಳಿಗೆ ಅನಿಲ ಪೂರೈಕೆ ಆರಂಭಿಸಲಾಗಿದೆ. ಹೊಸ ಸಂಪರ್ಕ ಕೋರಿ 5.68 ಲಕ್ಷಕ್ಕಿಂತ ಹೆಚ್ಚು ಅರ್ಜಿಗಳು ಬಂದಿವೆ.

ಪಶ್ಚಿಮ ಏಷ್ಯಾದಲ್ಲಿನ ಯುದ್ಧವು ಎಲ್ಪಿಜಿ ಪೂರೈಕೆಗೆ ಅಡ್ಡಿ ಉಂಟುಮಾಡಿದೆ. ಹೀಗಾಗಿ ಮನೆಗಳಲ್ಲಿ ಅಡುಗೆ ಮಾಡುವುದಕ್ಕೆ ಹಾಗೂ ಕೈಗಾರಿಕಾ ಉದ್ದೇಶಗಳಿಗೆ ಪಿಎನ್ಜಿ ಬಳಕೆ ಹೆಚ್ಚಬೇಕು ಎಂದು ಕೇಂದ್ರ ಸರ್ಕಾರ ಬಯಸುತ್ತಿದೆ.

‘ಈ ವರ್ಷದ ಮಾರ್ಚ್ ನಂತರದಲ್ಲಿ ಹೊಸದಾಗಿ 5.01 ಲಕ್ಷ ಸಂಪರ್ಕಗಳಿಗೆ ಪಿಎನ್ಜಿ ಪೂರೈಕೆ ಆರಂಭಿಸಲಾಗಿದೆ’ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಯುದ್ಧ ಆರಂಭಕ್ಕೂ ಮೊದಲೇ ನೀಡಿದ್ದ ಸಂಪರ್ಕಗಳು, ಯುದ್ಧ ಆರಂಭವಾದ ನಂತರ ಕೊಡಲಾದ ಸಂಪರ್ಕಗಳು ಇವುಗಳಲ್ಲಿ ಸೇರಿವೆ.

ಏಪ್ರಿಲ್ 19ರವರೆಗೆ 39,400 ಮಂದಿ ಪಿಎನ್ಜಿ ಗ್ರಾಹಕರು ತಮ್ಮ ಎಲ್ಪಿಜಿ ಸಂಪರ್ಕ ವಾಪಸ್ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮನೆಬಳಕೆ ಎಲ್ಪಿಜಿ ಪೂರೈಕೆಯು ಸ್ಥಿರವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-51-969348433

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.