ನವದೆಹಲಿ: ಕೊಳವೆ ಮೂಲಕ ನೈಸರ್ಗಿಕ ಅನಿಲ (ಪಿಎನ್ಜಿ) ಪೂರೈಕೆ ಮಾಡುವ ಯೋಜನೆಗಳಿಗೆ ಅನುಮೋದನೆ ನೀಡುವುದನ್ನು ಚುರುಕುಗೊಳಿಸಬೇಕು ಎಂದು ಕೇಂದ್ರ ಸರ್ಕಾರವು ರಾಜ್ಯಗಳಿಗೆ ಸೂಚನೆ ನೀಡಿದೆ.

ಎಲ್ಪಿಜಿ ಸಿಲಿಂಡರ್ ಪೂರೈಕೆಯಲ್ಲಿನ ವ್ಯತ್ಯಯವು ಹೋಟೆಲ್ಗಳು, ಉದ್ಯಮಗಳು ಹಾಗೂ ಕುಟುಂಬಗಳನ್ನು ಬಾಧಿಸುವುದು ಮುಂದುವರಿದಿರುವ ಹೊತ್ತಿನಲ್ಲಿ ಈ ಸೂಚನೆ ಬಂದಿದೆ. ಇನ್ನೊಂದೆಡೆ, ಎಲ್ಪಿಜಿ ಸಿಲಿಂಡರ್ ಬುಕ್ ಮಾಡಿರುವ ಗ್ರಾಹಕರು, ಸಿಲಿಂಡರ್ ಪಡೆಯಲು ಹೆಚ್ಚಿನ ಅವಧಿಗೆ ಕಾಯಬೇಕಾಗುತ್ತಿದೆ.

ಪಶ್ಚಿಮ ಏಷ್ಯಾದಲ್ಲಿನ ಸಮರವು ಭಾರತಕ್ಕೆ ಎಲ್ಪಿಜಿ ಪೂರೈಕೆಗೆ ಅಡ್ಡಿ ಉಂಟುಮಾಡಿದೆ. ಹೀಗಾಗಿ ಕೇಂದ್ರ ಸರ್ಕಾರವು ಇಂಡಕ್ಷನ್ ಕುಕ್ಟಾಪ್ ಸೇರಿದಂತೆ ವಿವಿಧ ಪರ್ಯಾಯಗಳ ಬಳಕೆಗೆ ಒತ್ತು ನೀಡಲಾರಂಭಿಸಿದೆ.

‘ಪರಿಸ್ಥಿತಿಯು ಕಳವಳಕಾರಿ ಆಗಿಯೇ ಇದೆ. ಆದರೆ ನಾವು ಮನೆಬಳಕೆಗೆ ಎಲ್ಪಿಜಿ ಪೂರೈಕೆಯನ್ನು ಮೊದಲಿನ ರೀತಿಯಲ್ಲಿಯೇ ಮಾಡುತ್ತಿದ್ದೇವೆ’ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಹೇಳಿದರು.

‘ಆದರೆ ನಾವು ಪರ್ಯಾಯಗಳತ್ತ ಗಮನ ಹರಿಸಬೇಕಾಗಿದೆ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಭೀತಿಗೆ ಒಳಗಾಗಿ ಎಲ್ಪಿಜಿ ಸಿಲಿಂಡರ್ ಬುಕ್ ಮಾಡುವುದು ಮಾರ್ಚ್ 13ರಂದು ಗರಿಷ್ಠ ಮಟ್ಟವನ್ನು ತಲುಪಿತ್ತು. ಆ ದಿನ ಒಟ್ಟು 87.7 ಲಕ್ಷ ಬುಕಿಂಗ್ ಬಂದಿದ್ದವು. ಸೋಮವಾರದ ಹೊತ್ತಿಗೆ ಬುಕಿಂಗ್ ಸಂಖ್ಯೆಯು ಸರಿಸುಮಾರು 70 ಲಕ್ಷಕ್ಕೆ ಇಳಿಕೆಯಾಗಿದೆ. ಯುದ್ಧಕ್ಕೂ ಮೊದಲು ದಿನವೊಂದಕ್ಕೆ 55 ಲಕ್ಷ ಬುಕಿಂಗ್ ಬರುತ್ತಿದ್ದವು ಎಂದು ಸುಜಾತಾ ತಿಳಿಸಿದರು.

ಮನೆಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಪೂರೈಕೆ ಸಾಕಾಗುವಷ್ಟು ಇದೆ ಎಂಬ ಭರವಸೆ ನೀಡಲಾಗಿದ್ದರೂ, ಜನ ಭೀತಿಗೆ ಒಳಗಾಗಿ ಬುಕ್ ಮಾಡುವುದು ನಿಂತಿಲ್ಲ ಎಂದರು. ಮಾರ್ಚ್ 5ರ ಮಟ್ಟಕ್ಕೆ ಹೋಲಿಸಿದರೆ ದೇಶಿ ಎಲ್ಪಿಜಿ ಉತ್ಪಾದನೆಯು ಶೇ 38ರಷ್ಟು ಹೆಚ್ಚಳ ಕಂಡಿದೆ.

ಎಲ್ಪಿಜಿ ಬೇಡಿಕೆ ಮೇಲಿನ ಒತ್ತಡವನ್ನು ತಗ್ಗಿಸಲು ಕೇಂದ್ರ ಸರ್ಕಾರವು ವಾಣಿಜ್ಯ ಬಳಕೆ ಹಾಗೂ ಮನೆಬಳಕೆ ಎಲ್ಪಿಜಿ ಗ್ರಾಹಕರಿಗೆ ಪಿಎನ್ಜಿ ಬಳಕೆ ಮಾಡುವಂತೆ ಒತ್ತಾಯಿಸುತ್ತಿದೆ. ನಗರ ಅನಿಲ ಪೂರೈಕೆ (ಪಿಎನ್ಜಿ ಪೂರೈಸುವ) ಕಂಪನಿಗಳು ತ್ವರಿತವಾಗಿ ಸಂಪರ್ಕ ಒದಗಿಸುತ್ತಿವೆ, ಉತ್ತೇಜನ ಕ್ರಮಗಳನ್ನು ಪ್ರಕಟಿಸಿವೆ.

‘ಕೇಂದ್ರ ಸರ್ಕಾರ ಕೂಡ ಪಿಎನ್ಜಿ ಜಾಲವನ್ನು ವಿಸ್ತರಿಸಲು ಕ್ರಮಗಳನ್ನು ಕೈಗೊಳ್ಳುತ್ತಿದೆ’ ಎಂದು ಹೇಳಿದರು.

ವಾಣಿಜ್ಯ ಬಳಕೆ ಎಲ್ಪಿಜಿ ದಾಸ್ತಾನನ್ನು ರಾಜ್ಯಗಳ ಕೈಗೆ ನೀಡಲಾಗಿದೆ. ಆದ್ಯತೆ ಮೇರೆಗೆ ಅದರ ಬಳಕೆ ಬಗ್ಗೆ ತೀರ್ಮಾನಿಸುವಂತೆ ರಾಜ್ಯಗಳನ್ನು ಕೋರಲಾಗಿದೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳು ಎಲ್ಪಿಜಿ ವಿತರಣೆಗೆ ಮಾರ್ಗಸೂಚಿ ಪ್ರಕಟಿಸಿವೆ ಎಂದು ಸುಜಾತಾ ಅವರು ವಿವರಿಸಿದರು.

ಕೇಂದ್ರದಿಂದ ರಾಜ್ಯಗಳಿಗೆ ಸೂಚನೆ

ಮಾರ್ಚ್ 16ರಂದು ಬರೆದಿರುವ ಪತ್ರದಲ್ಲಿ ಕೇಂದ್ರ ಸರ್ಕಾರ ನೀಡಿರುವ ಸೂಚನೆಗಳು ಹೀಗಿವೆ

ಪಿಎನ್ಜಿ ಯೋಜನೆಗಳಿಗೆ ತ್ವರಿತವಾಗಿ ಅನುಮೋದನೆ ನೀಡಬೇಕು

ಬೃಹತ್ ಪ್ರಮಾಣದ ನಗರ ಅನಿಲ ಯೋಜನೆಗಳಿಗೆ ಅನುಮತಿ ಕೋರಿರುವ ಅರ್ಜಿ ಬಾಕಿ ಇದ್ದಲ್ಲಿ, ಪರಿಭಾವಿತ ಅನುಮೋದನೆ ನೀಡಬೇಕು

ಹೊಸದಾದ ನಗರ ಅನಿಲ ಯೋಜನೆಗೆ 24 ಗಂಟೆಗಳಲ್ಲಿ ಅನುಮೋದನೆ ನೀಡಬೇಕು

ರಸ್ತೆಯನ್ನು ಮತ್ತೆ ಮೊದಲಿನ ಸ್ಥಿತಿಗೆ ತರುವ ಶುಲ್ಕವನ್ನು ಮನ್ನಾ ಮಾಡಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.