ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಸಿಬಜಾರ್‌ಡಾಟ್‌ಕಾಮ್: 9 ತಿಂಗಳಲ್ಲಿ ₹ 7 ಲಕ್ಷ ಕೋಟಿ ಮೌಲ್ಯದ ವಿಮೆ ಮಾರಾಟ

Last Updated 31 ಜನವರಿ 2021, 17:44 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ಅತಿದೊಡ್ಡ ಆನ್‍ಲೈನ್ ವಿಮೆ ವಿತರಣಾ ಕಂಪನಿಯಾಗಿರುವ ಪಾಲಿಸಿಬಜಾರ್‌ಡಾಟ್‌ಕಾಂ, 2020ರ ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ 10 ಲಕ್ಷ ಜನರಿಗೆ ವಿಮೆ ಸೌಲಭ್ಯ ಒದಗಿಸಿ ಹೊಸ ಮೈಲುಗಲ್ಲು ಸ್ಥಾಪಿಸಿದೆ.

‘ಈ ಒಂಬತ್ತು ತಿಂಗಳ ಅವಧಿಯಲ್ಲಿ, ₹ 7 ಲಕ್ಷ ಕೋಟಿ ಮೌಲ್ಯದ ವಿಮೆ ಇರುವ 4 ಲಕ್ಷ ಆರೋಗ್ಯ ವಿಮೆ ಪಾಲಿಸಿಗಳನ್ನು ಕಂಪನಿಯು ಮಾರಾಟ ಮಾಡಿದೆ. ಕೋವಿಡ್‌ನಿಂದಾಗಿ ಆರೋಗ್ಯ ವಿಮೆಗೆ ಹೆಚ್ಚಿದ ಬೇಡಿಕೆ, ಕಂಪನಿಯು ಹೊಸ ವಿಮೆ ಪಾಲಿಸಿಗಳನ್ನು ಪರಿಚಯಿಸಿರುವುದು, ಪ್ರೀಮಿಯಂ ಪಾವತಿಗೆ ಅನುಕೂಲಕರ ಪಾವತಿ ಆಯ್ಕೆ ನೀಡಿರುವುದು ಮತ್ತು ಆರೋಗ್ಯ ವಿಮೆ ಖರೀದಿ ಪ್ರಕ್ರಿಯೆಯನ್ನು ಬಹಳ ಸರಳ ಮತ್ತು ಅಗ್ಗಗೊಳಿಸಿರುವುದು ಈ ಸಾಧನೆಗೆ ಕಾರಣಗಳಾಗಿವೆ‘ ಎಂದು ಕಂಪನಿಯ ಸಿಇಒ ಸರ್ಬವೀರ್‌ ಸಿಂಗ್‌ ಹೇಳಿದ್ದಾರೆ.

ಉತ್ತಮ ಆರೋಗ್ಯ ವಿಮೆಗಾಗಿ ಗ್ರಾಹಕರು ಈ ಅವಧಿಯಲ್ಲಿ ಕಂಪನಿಯ ಅಂತರ್ಜಾಲ ತಾಣಕ್ಕೆ 1 ಕೋಟಿಗೂ ಅಧಿಕ ಗ್ರಾಹಕರು ಭೇಟಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT