ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಪಿಎಫ್‍ಎಎಸ್:ಬೆಂಗಳೂರಿನಲ್ಲಿ ಶಾಖೆ ಆರಂಭಿಸಲು ನಿರ್ಧಾರ

Last Updated 16 ನವೆಂಬರ್ 2018, 17:48 IST
ಅಕ್ಷರ ಗಾತ್ರ

ಬೆಂಗಳೂರು: ಮ್ಯೂಚುವಲ್‌ ಫಂಡ್‌ ವಹಿವಾಟು ನಡೆಸುವ ಪರಾಗ್‌ ಪರೀಖ್ ಫೈನಾನ್ಶಿಯಲ್‌ ಅಡ್ವೈಸರಿ ಸರ್ವಿಸ್‌ ಲಿಮಿಟೆಡ್‌ (ಪಿಪಿಎಫ್‍ಎಎಸ್) ವಹಿವಾಟು ವಿಸ್ತರಿಸಲು ಬೆಂಗಳೂರಿನಲ್ಲಿ ಕಚೇರಿ ಆರಂಭಿಸಲು ನಿರ್ಧರಿಸಿದೆ.

‘ಸಂಸ್ಥೆಯ ಪಾಲಿಗೆ ಬೆಂಗಳೂರು ಒಂದು ಪ್ರಮುಖ ಮಾರುಕಟ್ಟೆಯಾಗಿದೆ. ಗ್ರಾಹಕರು ಮತ್ತು ಪಾಲುದಾರರ ಜತೆ ಹೆಚ್ಚು ಸಂಪರ್ಕ ಸಾಧಿಸಲು ಹೊಸ ಶಾಖೆ ಆರಂಭಿಸಲಾಗುತ್ತಿದೆ’ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೀಲ್ ಪರಾಗ್ ಪರೀಖ್ ಹೇಳಿದ್ದಾರೆ.

ವಾರ್ಷಿಕ ಸರ್ವ ಸದಸ್ಯರ ಸಭೆ (ಎಜಿಎಂ) ನಡೆಸುತ್ತಿರುವ ದೇಶದ ಏಕೈಕ ಮ್ಯೂಚುವಲ್‌ ಫಂಡ್‌ ಎಂಬ ಹೆಗ್ಗಳಿಕೆಗೆ ಪಿಪಿಎಫ್‍ಎಎಸ್ ಪಾತ್ರವಾಗಿದೆ. ಬೆಂಗಳೂರಿನಲ್ಲಿ ಶನಿವಾರ (ನ. 17) ಸಭೆ ನಡೆಯಲಿದೆ.

ಸಂಸ್ಥೆಯು ದೀರ್ಘಾವಧಿಯ ಮ್ಯೂಚುವಲ್ ಫಂಡ್ ನಿರ್ವಹಿಸುತ್ತಿದ್ದು, ಐದು ವರ್ಷಗಳನ್ನು ಪೂರೈಸಿದೆ. ಮೇ ತಿಂಗಳಲ್ಲಿ ‘ಪರಾಗ್ ಪರೀಖ್ ಲಿಕ್ವಿಡ್ ಫಂಡ್’ ಆರಂಭಿಸಿದೆ. ವ್ಯವಸ್ಥಿತ ವರ್ಗಾವಣೆ ಯೋಜನೆ (ಎಸ್‍ಟಿಪಿ) ಸೌಲಭ್ಯವೂ ಇಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT