ಬೆಂಗಳೂರು: ಜಾಗತಿಕ ಮಟ್ಟದ ಐಷಾರಾಮಿ ಫ್ಯಾಷನ್ ಬ್ರ್ಯಾಂಡ್ ಆಗಿರುವ ಪ್ರಾಡಾ, ಭಾರತದ ಕೊಲ್ಹಾಪುರಿ ಶೈಲಿಯ ಚಪ್ಪಲಿಗಳಿಂದ ಪ್ರೇರಣೆ ಪಡೆದು, ರಾಜ್ಯದ ‘ಲಿಡ್ಕರ್’ ಸಹಯೋಗದಲ್ಲಿ ಸಿದ್ಧಪಡಿಸಿದ ಸೀಮಿತ ಆವೃತ್ತಿಯ ಪಾದರಕ್ಷೆಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಈ ಮಾದರಿಯ ಪಾದರಕ್ಷೆಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಾಡಾದ 40 ಮಳಿಗೆಗಳಲ್ಲಿ ಹಾಗೂ prada.com ಮೂಲಕ ಲಭ್ಯವಿವೆ. ಸಾಂಪ್ರದಾಯಿಕವಾದ ಕೊಲ್ಹಾಪುರಿ ಚಪ್ಪಲಿಗಳನ್ನು ತಯಾರಿಸುವ ಕರ್ನಾಟಕ ಮತ್ತು ಮಹಾರಾಷ್ಟ್ರದ ನುರಿತ ಕುಶಲಕರ್ಮಿಗಳಿಂದ ಈ ಪಾದರಕ್ಷೆಗಳನ್ನು ಸಿದ್ಧಪಡಿಸಲಾಗಿದೆ.

‘ಈ ಸಂಗ್ರಹವನ್ನು ಕರ್ನಾಟಕದ ಡಾ. ಬಾಬು ಜಗಜೀವನ್ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ (ಲಿಡ್ಕರ್) ಮತ್ತು ಮಹಾರಾಷ್ಟ್ರದ ಸಂತ ರೋಹಿದಾಸ್ ಲೆದರ್ ಇಂಡಸ್ಟ್ರೀಸ್ ಮತ್ತು ಚರ್ಮಕಾರ್ ಡೆವಲಪ್ಮೆಂಟ್ ಕಾರ್ಪೋರೇಷನ್ (ಲಿಡ್ಕಾಂ) ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದೆ’ ಎಂದು ಪ್ರಕಟಣೆ ತಿಳಿಸಿದೆ.

‘ಈ ಎರಡೂ ಸರ್ಕಾರಿ ಸಂಸ್ಥೆಗಳು ಕೊಲ್ಹಾಪುರಿ ಚಪ್ಪಲಿಗಳ ಪರಂಪರೆಯನ್ನು ರಕ್ಷಿಸುವ, ಉತ್ತೇಜಿಸುವ ಮತ್ತು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿವೆ’ ಎಂದು ಕೂಡ ಪ್ರಕಟಣೆಯಲ್ಲಿ ಹೇಳಲಾಗಿದೆ.

ರಾಜ್ಯ ಸರ್ಕಾರದ ‘ಲಿಡ್ಕರ್’ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕಿ ಕೆ.ಎಂ. ವಸುಂಧರಾ ಅವರು, ‘ಪ್ರಾಡಾ ಜೊತೆಗಿನ ಈ ಸಹಯೋಗವು ರಾಜ್ಯದ ಸಾಂಪ್ರದಾಯಿಕ ಕೌಶಲವನ್ನು ಜಾಗತಿಕ ಹಂತಕ್ಕೆ ಎತ್ತರಿಸುವ ನಿಟ್ಟಿನಲ್ಲಿ ಇರಿಸಿರುವ ಮಹತ್ವದ ಹೆಜ್ಜೆಯಾಗಿದೆ’ ಎಂದು ಹೇಳಿದ್ದಾರೆ.

ಪ್ರಾಡಾ ಕಂಪನಿಯು ಕರ್ನಾಟಕ ಮತ್ತು ಮಹಾರಾಷ್ಟ್ರದ ಚರ್ಮದ ಪಾದರಕ್ಷೆ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ಕುಶಲ ಕರ್ಮಿಗಳಿಗೆ ತರಬೇತಿಯನ್ನು ಕೂಡ ಆಯೋಜಿಸುತ್ತಿದೆ. ಈ ತರಬೇತಿ ಕಾರ್ಯಕ್ರಮದಲ್ಲಿ ರಾಜ್ಯದ ‘ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಲೆದರ್ & ಫ್ಯಾಷನ್ ಟೆಕ್ನಾಲಜಿ’ ಸಂಸ್ಥೆಯ ಸಹಭಾಗಿತ್ವ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.