ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

NHAI-REC ಬಾಂಡ್‌ಗಳ ಬಗ್ಗೆ ವಿವರಣೆ

ಪ್ರಶ್ನೋತ್ತರ
Last Updated 2 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

ಅಭಿಷೇಕ್, ಬೆಂಗಳೂರು
NHAI-REC ಬಾಂಡ್‌ಗಳ ವಿವರಣೆ ತಿಳಿಸಿ. ಎಲ್ಲಿ ಹಣ ಕಟ್ಟಬೇಕು ತಿಳಿಸಿ.

ಉತ್ತರ:NHAI-REC ಬಾಂಡ್‌ ಅವಧಿ 5 ವರ್ಷಗಳು. ಬಡ್ಡಿ ದರ ಶೇ 5.25. ವಾರ್ಷಿಕವಾಗಿ ಬಡ್ಡಿ ಪಡೆಯಬಹುದು ಅಥವಾ ಒಮ್ಮೆಲೇ ಕೂಡ ಪಡೆಯಬಹುದು. ಈ ಮಾರ್ಗ ಕ್ಯಾಪಿಟಲ್ ಗೇನ್‌ ಟ್ಯಾಕ್ಸ್‌ ಕೊಡುವವರಿಗೆ ಸೂಕ್ತ. ನೀವು ಸ್ಥಿರ ಆಸ್ತಿ ಮಾರಾಟ ಮಾಡದಿರುವಲ್ಲಿ ಅಂಚೆ ಕಚೇರಿ–ಬ್ಯಾಂಕ್‌ ಠೇವಣಿಯಲ್ಲಿ ಹಣ ಹೂಡಿಕೆ ಮಾಡಿ.

***
ರಾಮಕುಮಾರ್, ಊರು ಬೇಡ
ನಮ್ಮ ತಂಗಿ ಮಗಳಿಗೆ ಪ್ರಸ್ತುತ 5 ತಿಂಗಳು. ₹ 2 ಲಕ್ಷ ಅವಳ ಹೆಸರಿನಲ್ಲಿ ಹೂಡಿಕೆ ಮಾಡಲು ಯಾವ ರೀತಿ ಹಣ ಇಟ್ಟರೆ ಮುಂದಿನ ಮದುವೆ ಸಮಯಕ್ಕೆ ಉಪಯೋಗವಾಗುತ್ತದೆ ತಿಳಿಸಿರಿ. ಪ್ರತಿ ತಿಂಗಳೂ ಹಣ ಒಟ್ಟು ಗೂಡಿಸಲು ಸಾಧ್ಯವಿಲ್ಲವಾದ್ದರಿಂದ ಸಂಬಂಧಿಗಳು ಸೇರಿ ₹ 2 ಲಕ್ಷ ಹೊಂದಿಸಿದ್ದಾರೆ. ಸಲಹೆ ನೀಡಿರಿ.

ಉತ್ತರ: ನೀವು ಒಟ್ಟುಗೂಡಿಸಿದ ₹ 2 ಲಕ್ಷ ಹಣವನ್ನು 10 ವರ್ಷಗಳ ಅವಧಿಗೆ, ನಿಮ್ಮ ಮನೆಗೆ ಸಮೀಪದ ಬ್ಯಾಂಕಿನಲ್ಲಿ ಒಮ್ಮೇಲೆ ಬಡ್ಡಿ ಬರುವ (Reinvestment Deposit) ಠೇವಣಿಯಲ್ಲಿ ಇರಿಸಿ. 10 ವರ್ಷ ಮುಗಿಯುತ್ತಲೇ ಅಸಲು ಬಡ್ಡಿ ಸೇರಿಸಿ ಇನ್ನೂ 10 ವರ್ಷದ ಅವಧಿಗೆ ಅದೇ ಠೇವಣಿಯಲ್ಲಿ ಇರಿಸಿರಿ. ಅಷ್ಟರಲ್ಲಿ ಮಗುವಿಗೆ 20 ವರ್ಷವಾಗುತ್ತದೆ. ಈ ದೊಡ್ಡ ಮೊತ್ತದಿಂದ ವಿದ್ಯಾಭ್ಯಾಸ, ಮದುವೆಗೆ ಅನುಕೂಲವಾಗುತ್ತದೆ. ಬ್ಯಾಂಕುಗಳಲ್ಲಿ 10 ವರ್ಷಕ್ಕೂ ಹೆಚ್ಚಿನ ಅವಧಿ ಠೇವಣಿ ಮಾಡುವಂತಿಲ್ಲ. ಈ ಕಾರಣದಿಂದ ಪ್ರಥಮ 10 ವರ್ಷ ಠೇವಣಿ ಇರಿಸಿ, ಮುಂದೆ ಅದೇ ಮೊತ್ತ ಮುಂದಿನ 10 ವರ್ಷಕ್ಕೆ ನವೀಕರಿಸಬೇಕು.

***
ಶಿವಾನಂದ ಪಟಾಣಿ, ಧಾರವಾಡ
ಅಟಲ್ ಪಿಂಚಣಿ ಯೋಜನೆಯಲ್ಲಿ ಅವಧಿ ಮುಗಿದು ಪಿಂಚಣಿ ದೊರೆಯುತ್ತದೆ. ಆದರೆ, ಆರ್.ಡಿ. ಗಿಂತ ಅಟಲ್ ಪಿಂಚಣಿ ಹೇಗೆ ಉತ್ತಮ? ನಾನು SBI ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಲು ಏನು ಮಾಡಬೇಕು ತಿಳಿಸಿ.

ಉತ್ತರ: ಪಿಂಚಣಿ ತತ್ವ, ಆರ್.ಡಿ. ತತ್ವ ಬೇರೆ ಬೇರೆಯೇ ಆಗಿರುತ್ತದೆ. ಇಳಿವಯಸ್ಸಿನಲ್ಲಿ ಸುಖವಾಗಿ ಜೀವಿಸಲು ಎಲ್ಲರಿಗೂ ಪಿಂಚಣಿ ಅಗತ್ಯವಿದೆ. ಆ ಉದ್ದೇಶಕ್ಕೆ ಅಟಲ್‌ ಪಿಂಚಣಿ ಪ್ರಾರಂಭಿಸಿದ್ದಾರೆ. ಇದನ್ನು ಆರ್.ಡಿ.ಗೆ ಹೋಲಿಸಲು ಬರುವುದಿಲ್ಲ.SBI ಮ್ಯೂಚುವಲ್ ಫಂಡ್‌ ಹೂಡಿಕೆಗೆ ನಿಮ್ಮ ಮನೆ ಸಮೀಪದSBI ಶಾಖೆ ಸಂಪರ್ಕಿಸಿ.

***
ಚಂದ್ರಶೇಖರಯ್ಯ, ತುಮಕೂರು
ನಾನು₹ 20 ಲಕ್ಷವನ್ನು ಸಹಕಾರಿ ಬ್ಯಾಂಕ್‌ನಲ್ಲಿ ಠೇವಣಿ ಇರಿಸಿದ್ದೇನೆ.NHAIದಲ್ಲಿ ಹೂಡಿದರೆ ಹೆಚ್ಚಿಗೆ ವರಮಾನ ಬರಬಹುದೇ. ಇತರ ಉತ್ತಮ ಹೂಡಿಕೆ, ಭದ್ರತೆ ಬಗ್ಗೆ ತಿಳಿಸಿರಿ.

ಉತ್ತರ:NHAI ಮುಖ್ಯವಾಗಿ Capital Gain Tax ಉಳಿಸುವವರಿಗೆ ಮಾತ್ರ ಉಪಯೋಗವಾಗಿದ್ದು, ಇಲ್ಲಿ ದ್ರವ್ಯತೆ ಇರುವುದಿಲ್ಲ. ಬಡ್ಡಿ ದರ ಶೇ 5.25 ಇರುತ್ತದೆ. ನೀವು ಅಂಚೆ ಕಚೇರಿ Senior Citizen Deposit ನಲ್ಲಿ ಗರಿಷ್ಠ₹ 15 ಲಕ್ಷ ತೊಡಗಿಸಿ. ಇಂದಿನ ಬಡ್ಡಿ ದರ ಶೇ 8.7 ಹಾಗೂ ಮೂರು ತಿಂಗಳಿಗೊಮ್ಮೆ ಬಡ್ಡಿ ಪಡೆಯಬಹುದು. ಉಳಿದ ಹಣ ಸಹಕಾರಿ ಬ್ಯಾಂಕ್‌ನಲ್ಲಿಯೇ ಮುಂದುವರೆಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT