ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಹಣವನ್ನು ಸುರಕ್ಷಿತವಾಗಿ ಎಲ್ಲಿ ಹೂಡಿಕೆ ಮಾಡಲಿ?

Last Updated 20 ನವೆಂಬರ್ 2018, 19:30 IST
ಅಕ್ಷರ ಗಾತ್ರ

ನಾನು ನಿವೃತ್ತ PSU ನೌಕರ. ವಯಸ್ಸು 62. ನಾನು ನಿವೃತ್ತಿಯಿಂದ ಬಂದ ₹ 50 ಲಕ್ಷವನ್ನು SBI ನಲ್ಲಿ ಎಫ್.ಡಿ. ಮಾಡಿದ್ದೇನೆ. ವಾರ್ಷಿಕ ಬಡ್ಡಿ₹ 3.50 ಲಕ್ಷ. ನನಗೆ ಪಿಂಚಣಿ ಇಲ್ಲ ಹಾಗೂ ಬೇರಾವ ಆದಾಯವೂ ಇಲ್ಲ. ನಾನು ತೆರಿಗೆ ಉಳಿಸಲು ಸೆಕ್ಷನ್ 80ಸಿ ಆಧಾರದ ಮೇಲೆ₹ 1.50 ಲಕ್ಷ ಠೇವಣಿ ಮಾಡಿದ್ದೇನೆ. SBI ನವರು 15G ಫಾರಂ ತೆಗೆದುಕೊಳ್ಳುತ್ತಿಲ್ಲ ಹಾಗೂ TDS ಮಾಡುತ್ತಾರೆ. ನಾನು ತೆರಿಗೆಗೆ ಒಳಗಾಗುವುದಿಲ್ಲ. ದಯಮಾಡಿ ಮಾರ್ಗದರ್ಶನ ಮಾಡಿರಿ.

–ಬಿ.ವಿ. ರಾಜು, ಬೆಂಗಳೂರು

ಉತ್ತರ: ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ವಾರ್ಷಿಕ ಆದಾಯ ಆತನ ಆದಾಯದ ಮಿತಿ ದಾಟಿದಲ್ಲಿ ಬ್ಯಾಂಕುಗಳು 15G ನಮೂನೆ ಫಾರಂ ಸಲ್ಲಿಸಲು ಅವಕಾಶವಿರುದಿಲ್ಲ. ನೀವು ಹಿರಿಯ ನಾಗರಿಕರಾಗಿದ್ದು ನಿಮ್ಮ ಮಿತಿ₹ 3 ಲಕ್ಷವಿದ್ದು, ಬಡ್ಡಿ ಆದಾಯ₹ 3.50 ಲಕ್ಷ ಇರುವುದರಿಂದ SBI–TDS ಮಾಡಿರುತ್ತದೆ. ಸುಲಭ ಉಪಾಯವೆಂದರೆ, ಒಂದೇ ಬ್ಯಾಂಕಿನಲ್ಲಿ₹ 50 ಲಕ್ಷ ಇರಿಸುವುದಕ್ಕಿಂತ ಎರಡು ಅಥವಾ ಮೂರು ಬ್ಯಾಂಕುಗಳಲ್ಲಿ ಠೇವಣಿ ಇರಿಸಿ, 15G ಫಾರಂ ಸಲ್ಲಿಸುವುದು. ಒಟ್ಟಿನಲ್ಲಿ ನೀವು ತೆರಿಗೆಗೆ ಒಳಗಾಗದಿರುವುದರಿಂದ ಈ ಮಾರ್ಗವೇ ಲೇಸು. 1.4.2018 ರಿಂದ ಹಿರಿಯ ನಾಗರಿಕರ ಠೇವಣಿ ಮೇಲಿನ ಬಡ್ಡಿ ಸೆಕ್ಷನ್ 80 TTB ಆಧಾರದ ಮೇಲೆ₹ 50,000 ತನಕ ರಿಯಾಯ್ತಿ ಪಡೆಯಬಹುದು.

**

ನಾನು₹ 9 ಲಕ್ಷಕ್ಕೆ ಆಸ್ತಿ ಮಾರಾಟ ಮಾಡಿದೆ. ನನ್ನ ವಾರ್ಷಿಕ ಆದಾಯ₹ 1.20 ಲಕ್ಷ. ನಾನು ಬಂದಿರುವ ಹಣಕ್ಕೆ ತೆರಿಗೆ ಕಟ್ಟಬೇಕೇ ತಿಳಿಸಿರಿ. ಬಂದಿರುವ₹ 9 ಲಕ್ಷ ಸುರಕ್ಷಿತವಾಗಿ ಎಲ್ಲಿ ಹೂಡಿಕೆ ಮಾಡಲಿ.

–ಗುರುರಾಜ ಮುನವಲ್ಲಿ, ಧಾರವಾಡ

ಉತ್ತರ: ನಿಮ್ಮ ವಾರ್ಷಿಕ ಆದಾಯ₹ 1.20 ಲಕ್ಷವಾಗಿದ್ದು, ಬೇರಾವ ಆದಾಯವಿಲ್ಲದಿರುವುದಾದರೆ ನೀವು ತೆರಿಗೆ ಕೊಡುವ ಪ್ರಮೇಯ ಬರುವುದಿಲ್ಲ. ಆದಾರೆ ಸ್ಥಿರ ಆಸ್ತಿ ಮಾರಾಟ ಮಾಡಿ ಬಂದ ಹಣದಿಂದ ಬಂದಿರುವ ಲಾಭಕ್ಕೆ Captal Gain Tax ಕೊಡಬೇಕಾಗುತ್ತದೆ. ತೆರಿಗೆ ಉಳಿಸಲು ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾ ಅಥವಾ ರೂರಲ್ ಎಲೆಕ್ಟ್ರಿಫಿಕೇಷನ್ ಬಾಂಡ್‌ಗಳಲ್ಲಿ 5 ವರ್ಷಗಳ ಅವಧಿಗೆ ತೊಡಗಿಸಬಹುದು.

ನೀವು ಪಡೆದಿರುವ₹ 9 ಲಕ್ಷ ಮೇಲೆ ಹೇಳಿದಂತೆ NHIA OR REC ಯಲ್ಲಿ ತೊಡಗಿಸುವುದು ಉತ್ತಮ. ಇದರಿಂದCaptal Gain Tax ಉಳಿಯುತ್ತದೆ. ಇದು ಬೇಡವಾದಲ್ಲಿCaptal Gain Tax ತುಂಬಿ ಉಳಿದ ಹಣ ಬ್ಯಾಂಕಿನಲ್ಲಿ ಠೇವಣಿ ಮಾಡಿ. ಹಣ ದ್ವಿಗುಣ, ಕಮಿಷನ್, ಊಹಾ ಪೋಹಗಳಿಂದ ಕೂಡಿದ ಹೂಡಿಕೆ ಇವುಗಳಲ್ಲಿ ತೊಡಗಿಸಿ ಅಸಲನ್ನೇ ಕಳೆದುಕೊಳ್ಳಬೇಡಿ. ಹೂಡಿಕೆಯಲ್ಲಿ ಸುರಕ್ಷಿತ ಹಾಗೂ ನಿಶ್ಚಿತ ವರಮಾನ ಬಹುಮುಖ್ಯ.

**

ನಾನು ಸೇನೆಯ ನಿವೃತ್ತ ನೌಕರ. ನಿವೃತ್ತಿಯಿಂದ₹ 25 ಲಕ್ಷ ಬಂದಿದೆ. ಸುರಕ್ಷಿತ ಹೂಡಿಕೆ, ಉತ್ತಮ ಜೀವನ ನಿರ್ವಹಣೆ– ವಿಚಾರಗಳಲ್ಲಿ ಮಾಹಿತಿ ನೀಡಿರಿ.

–ಕೆ. ದಿವಾಕರ, ಬೆಂಗಳೂರು​

ಉತ್ತರ: ನೀವು ನಿಮ್ಮ ನಿವೃತ್ತಿಯಿಂದ ಬಂದ ಹಣವನ್ನು ಅಂಚೆ ಕಚೇರಿಯಲ್ಲಿ Senior citizen depositನಲ್ಲಿ 5 ವರ್ಷಗಳ ಅವಧಿಗೆ ಹೂಡಿ. ಇಲ್ಲಿ ನಿಮ್ಮ ಠೇವಣಿಗೆ ಮೂರು ತಿಂಗಳಿಗೊಮ್ಮೆ ಬಡ್ಡಿ ಬರುತ್ತದೆ. ಪ್ರಸ್ತುತ ಠೇವಣಿ ಮೇಲಿನ ಬಡ್ಡಿ ದರಶೇ 8.7. ಪ್ರಾಯಶಃ ಇಷ್ಟು ಹೆಚ್ಚಿನ ಬಡ್ಡಿ ಯಾವ ರಾಷ್ಟ್ರೀಕೃತ ಬ್ಯಾಂಕು ಕೊಡಲಾರದು. ಜೊತೆಗೆ ಅಂಚೆ ಕಚೇರಿ ಕೇಂದ್ರ ಸರ್ಕಾರದ ಸಂಸ್ಥೆಯಾಗಿದ್ದು ನೀವು ಬಯಸುವ ಸುರಕ್ಷಿತ ಹೂಡಿಕೆಗೆ ಎರಡು ಮಾತಿಲ್ಲ. ಇಲ್ಲಿ ಬರುವ ಹಣ ನೀವು ಪಡೆಯುವ ಪಿಂಚಣಿ ಸೇರಿಸಿ, ಜೀವನದ ಸಂಜೆಯಲ್ಲಿ ಯಾರ ಹಂಗೂ ಇಲ್ಲದೆ ಉತ್ತಮ ಜೀವನ ನಿರ್ವಹಣೆ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT