ಪ್ರೆಸ್ಟೀಜ್‌ ಗ್ರೂಪ್‌ಗೆ ₹ 67 ಕೋಟಿ ಲಾಭ

7

ಪ್ರೆಸ್ಟೀಜ್‌ ಗ್ರೂಪ್‌ಗೆ ₹ 67 ಕೋಟಿ ಲಾಭ

Published:
Updated:

ಬೆಂಗಳೂರು: ರಿಯಲ್‌ ಎಸ್ಟೇಟ್‌ ಸಂಸ್ಥೆ ಪ್ರೆಸ್ಟೀಜ್‌ ಗ್ರೂಪ್‌, ಪ್ರಸಕ್ತ ಹಣಕಾಸು ವರ್ಷದ ಮೂರನೆ ತ್ರೈಮಾಸಿಕದಲ್ಲಿ
₹ 67.40 ಕೋಟಿ ನಿವ್ವಳ ಲಾಭ ಗಳಿಸಿದೆ.

ಸಂಸ್ಥೆಯ ಒಟ್ಟಾರೆ ವರಮಾನ ₹ 1,103 ಕೋಟಿಗಳಷ್ಟಾಗಿದೆ. ಒಂಬತ್ತು ತಿಂಗಳಲ್ಲಿನ ವರಮಾನವು ₹ 3,358 ಕೋಟಿಗಳಷ್ಟಾಗಿದೆ.

‘ಈ ಹಣಕಾಸು ವರ್ಷದಲ್ಲಿನ ವಹಿವಾಟು ಗಮನಾರ್ಹವಾಗಿ ಹೆಚ್ಚಳಗೊಂಡಿದೆ. 9 ವಸತಿ, 5 ಕಚೇರಿ ಮತ್ತು 3 ರಿಟೇಲ್‌ ಯೋಜನೆಗಳಲ್ಲಿ 2.40 ಕೋಟಿ ಚದರ ಅಡಿ ಅಭಿವೃದ್ಧಿಪಡಿಸಲಾಗಿದೆ.

ಎಲ್ಲ ಭಾಗಿದಾರರ ನೆರವಿನಿಂದ ಈ ಮೈಲುಗಲ್ಲು ತಲುಪಲು ಸಾಧ್ಯವಾಗಿದೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಇರ್ಫಾನ್‌ ರಜಾಕ್‌ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !