ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆ ಏರಿಕೆ ನಿರೀಕ್ಷೆ: ಪೆಟ್ರೋಲ್‌, ಡೀಸೆಲ್‌ ಮಾರಾಟ ಹೆಚ್ಚಳ

Last Updated 16 ಮಾರ್ಚ್ 2022, 12:29 IST
ಅಕ್ಷರ ಗಾತ್ರ

ನವದೆಹಲಿ: ಐದು ರಾಜ್ಯಗಳ ಚುನಾವಣೆ ಬಳಿಕ ದೇಶದಲ್ಲಿ ಇಂಧನ ದರ ಹೆಚ್ಚಾಗುತ್ತದೆ ಎಂಬ ನಿರೀಕ್ಷೆಯಿಂದಾಗಿ ಮಾರ್ಚ್‌ ತಿಂಗಳ ಮೊದಲ 15 ದಿನಗಳಲ್ಲಿ ಇಂಧನ ಮಾರಾಟವು ಕೋವಿಡ್‌ ಪೂರ್ವದ ಮಟ್ಟವನ್ನು ಮೀರಿದೆ.

ಉದ್ಯಮದ ಪ್ರಾಥಮಿಕ ಮಾಹಿತಿಯ ಪ್ರಕಾರ, ಮಾರ್ಚ್ 1ರಿಂದ 15ರವರೆಗಿನ ಅವಧಿಯಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು 12.3 ಲಕ್ಷ ಟನ್‌ ಪೆಟ್ರೋಲ್‌ ಮಾರಾಟ ಮಾಡಿವೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಮಾರಾಟವು ಶೇ 18ರಷ್ಟು ಏರಿಕೆ ಆಗಿದೆ. 2019ರ ಮಾರ್ಚ್‌ನ 15 ದಿನಗಳ ಅವಧಿಗಿಂತ ಶೇ 24.4ರಷ್ಟು ಹೆಚ್ಚು ಮಾರಾಟ ಆಗಿದೆ.

ಡೀಸೆಲ್‌ ಮಾರಾಟವು ಶೇ 23.7ರಷ್ಟು ಹೆಚ್ಚಾಗಿ 35.3 ಲಕ್ಷ ಟನ್‌ಗೆ ತಲುಪಿದೆ. 2019ರ ಮಾರ್ಚ್‌ 1ರಿಂದ 15ರವರೆಗೆ ಆಗಿದ್ದ ಮಾರಾಟಕ್ಕೆ ಹೋಲಿಸಿದರೆ ಶೇ 17.3ರಷ್ಟು ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT